ಯಾದಗಿರಿ: ತಾಲೂಕಿನ ಕೌಳೂರಿನಲ್ಲಿ ಸಿದ್ಧರಾಮೇಶ್ವರ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು.
ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ನಂತರ ದೇವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ಊರ ಪ್ರಮುಖ ಬೀದಿಗಳಲ್ಲಿ ಭಾಜಾ ಬಜಂತ್ರಿ, ಡೊಳ್ಳು ಕಳಸದೊಂದಿಗೆ ಮೆರವಣಿಗೆ ಮಾದಲಾಯಿತು.
ಕನ್ನೇಕೋಳೂರು ಮಠದ ಚನ್ನವೀರ ಶಿವಾಚಾರ್ಯರು ರಥೋತ್ಸವಕ್ಕೆ ಚಾಲನೆ ನೀಡಿದರು.
ಬಸವರಾಜ ಶಾಸ್ತ್ರಿ ಅವರಿಂದ ವಚನ ಪ್ರವಚನದ ಮಹಾಮಂಗಲ ಜರುಗಿತು.
ಕನ್ನೇಕೋಳೂರಿನ ಶ್ರೀಗಳು ಆಶೀರ್ವಚನ ನೀಡಿ, ಪರಂಪರೆಯಿಂದ ಬಂದ ಜಾತ್ರೆಗಳು, ಉತ್ಸವಗಳು ಮನಸ್ಸಿಗೆ ಉಲ್ಲಾಸವನ್ನು ನೀಡುತ್ತವೆ ಎಂದರು.
ಶಿವುಗೌಡ ಸ್ವಾಗತ ಕೋರಿದರು. ರುದ್ರಮುನಿ ಕನ್ನೆಕೋಳೂರು ನಿರೂಪಿಸಿದರು. ಚನ್ನಬಸವಶಾಸ್ತ್ರಿ ನಿಂಭಾಳ, ಚನ್ನವೀರಯ್ಯ ಸ್ವಾಮೀಜಿ ಇತರರು ಇದ್ದರು.