ಸೇಡಂ: ಸೇಡಂನ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಈಚೆಗೆ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್, ಸೇಡಂ ಇವರ ಸಂಯುಕ್ತ ಆಶ್ರಯದಲ್ಲಿ ಕೆಸಿಎಸ್ಆರ್ ತರಬೇತಿ ಕಾರ್ಯಾಗಾರದ ಸಮಾರೋಪದಲ್ಲಿ ನಾಟಕ ಶಿಕ್ಷಕ ಅಶೋಕ ತೊಟ್ನಳ್ಳಿ ನಿರ್ದೇಶನದ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಪ್ರಯುಕ್ತ ಧರ್ಮ ಮತ್ತು ಮೊಚಿ ನಾಟಕವನ್ನು ಸ.ಪ್ರೌ.ಶಾಲೆ ಜಾಕನಪಲ್ಲಿ ನಾನು- ನಮ್ಮೂರು ಮಕ್ಕಳ ವೇದಿಕೆಯಿಂದ ಪ್ರದರ್ಶಿಸಲಾಯಿತು. ನಾಟಕ ಶಿಕ್ಷಕ ಅಶೋಕ ತೊಟ್ನಳ್ಳಿಯವರನ್ನು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶಿವಯ್ಯಸ್ವಾಮಿ ಬಿಬ್ಬಳ್ಳಿಯವರು ಸನ್ಮಾನಿಸಿದರು. ಪ್ರತಿಭಾ ಪರಿಷತ್ತಿನ ಅಧ್ಯಕ್ಷರಾದ ಅಶೋಕರೆಡ್ಡಿ ಚಿಲುಮೆ, ಶಿವರಾಯ ಬೊವಿ, ತಿಪ್ಪಯ್ಯ ಗುತ್ತೆದಾರ ಇದ್ದರು.
---