ಮರಳು ಸಾಗಣೆ: ಲಾರಿಗಳ ಜಪ್ತಿ

Updated on: 

ಅಫಜಲ್ಪುರ: ಅಕ್ರಮವಾಗಿ ಭೀಮಾ ನದಿಯಿಂದ ಮರಳು ಸಾಗಿಸುತ್ತಿರುವ ಲಾರಿಗಳನ್ನು ತಹಸೀಲ್ದಾರ್ ರಾಜಾ ಪಟೇಲ್ ಜಪ್ತಿ ಮಾಡಿ ದಂಡ ವಿಧಿಸಿದರು.ಬಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಕುಮಸಗಿ ಗ್ರಾಮದ ಭೀಮಾ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿರುವ 5 ಲಾರಿಗಳನ್ನು ಪರಿಶೀಲಿಸಿ ಅದರಲ್ಲಿ ಅಕ್ರಮ ಮರಳು ಸಾಗಾಣೆ ಮಾಡುತ್ತಿರುವ 2ಲಾರಿಗಳಿಗೆ ತಹಸೀಲ್ದಾರ್ ಜಪ್ತಿ ಮಾಡಿ ಪ್ರತಿ ಲಾರಿಗೆ 25 ಸಾವಿರ ದಂಡ ವಿಧಿಸಿದರು.ಅದರಲ್ಲಿ 3 ಲಾರಿಗಳು ರಾಯಲ್ಟಿ ಹೊಂದಿವೆ. ಆದರೆ ಓವರ್‌ಲೋಡ್ ಇದ್ದುದರಿಂದ 3 ಲಾರಿಗಳನ್ನು ತಹಸೀಲ್ದಾರ ಕಚೇರಿ ಆವರಣದಲ್ಲಿ ನಿಲ್ಲಿಸಲಾಗಿದೆ. ಅಕ್ರಮಗಾಗಿ ಮಹಾರಾಷ್ಟ್ರಕ್ಕೆ ಮರಳು ಸಾಗಿಸುತ್ತಿರುವ ಲಾರಿಗಳ ಮಾಲಿಕರಿಗೂ ಮತ್ತು ಚಾಲಕರಿಗೆ ಮುಂದೆ ಈ ತರಹ ಕೆಲಸ ಮುಂದುವರಿಸಿದರೆ ನಿಮಗೆ ಯೋಗ್ಯ ಶಿಕ್ಷೆ ನೀಡಬೇಕಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಉಪತಹಸೀಲ್ದಾರ್ ಇದ್ದರು.
ಪ್ರೌಢಶಾಲೆಯಲ್ಲಿ ವಸ್ತುಗಳ ಕಳವು
ಗುಲ್ಬರ್ಗ: ಭೀಮಳ್ಳಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳ್ಳತನವಾಗಿದೆ. ಶಾಲೆಯಲ್ಲಿದ್ದ ಗಣಕಯಂತ್ರ, ಬಿಸಿಯೂಟ ಸಾಮಗ್ರಿಗಳನ್ನು ಕಳ್ಳರು ಹೊತ್ತುಕೊಂಡು ಹೋಗಿದ್ದಾರೆ. ರಾತ್ರಿ ಕಳವಾಗಿದೆ ಎಂದು ಶಾಲೆಯ ಮುಖ್ಯಗುರು ಎಚ್.ವೀರಭದ್ರಪ್ಪ ದೂರು ನೀಡಿದ್ದು ಗುಲ್ಬರ್ಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ
ಆಳಂದ ತಾಲೂಕಿನ ಕೆರೂರಲ್ಲಿ ಸಂಭವಿಸಿರುವ ಹಲ್ಲೆ ಪ್ರಕರಣದಲ್ಲಿ ಶೆಟಬಾಯಿ ಹಾಗೂ ಅಂದಪ್ಪ ದಂಪತಿಗಳ ಮೇಲೆ ಬಾಬೂರಾವ ಹಾಗೂ ಆತನ ಪತ್ನಿ ಮಡೆವ್ವ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಶೆಟಬಾಯಿ ದೂರು ನೀಡಿದ್ದು ಮಾದನಹಿಪ್ಪರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಜಗಳದಲ್ಲಿ ತನ್ನ ಗಂಡನಿಗೆ ಬಾಬೂರಾವ ದಂಪತಿ ಕಪಾಳಮೋಕ್ಷ ಸಹ ಮಾಡಿದ್ದಾರೆ. ಬಿಡಿಸಲು ಹೋದ ತಮ್ಮ ಮೇಲೂ ಕೈ ಮಾಡಿದ್ದಾರೆಂದು ಶೆಟಬಾಯಿ ದೂರಿನಲ್ಲಿ ವಿವರಿಸಿದ್ದು ಕ್ರಮಕ್ಕೆ ಆಗ್ರಹಿಸಿದ್ದಾಳೆ.
ಜೂಜು ಅಡ್ಡೆ : ಕರವೇ ಆಕ್ರೋಶ
ಅಫಜಲ್ಪುರ: ಪಟ್ಟಣದಲ್ಲಿರುವ ಗ್ರಾಮ ಲೆಕ್ಕಿಗರ ಭವನವು ಕಳೆದ ಸೋಮವಾರ ಇಸ್ಪಿಟ್, ಮಧ್ಯದ ಬಾಟಲಿಗಳ ತಾಣವಾಗಿ ಮಾರ್ಪಟ್ಟಿತ್ತು ಎಂದು ಕರವೇ ಫೋಟೋ ಸಮೇತ ಆರೋಪ ಮಾಡಿದೆ.ರೈತರು ಸಾಮಾನ್ಯ ಜನರು ತಮ್ಮ ಕೆಲಸಗಳ ನಿಮಿತ್ಯವಾಗಿ ಗ್ರಾಮ ಲೆಕ್ಕಿಗರ ಹತ್ತಿರ ಭೇಟಿಯಾಗಲು ಅವರ ಭವನಕ್ಕೆ ಬರುತ್ತಾರೆ. ಅಲ್ಲಿ ಬಂದ ರೈತರು ಅಲ್ಲಿ ಕಂಡ ದೃಶ್ಯಗಳನ್ನು ನೋಡಿ ಕೆಲ ಕಾಲ ಸ್ಥಬ್ದರಾದರು. ಅಲ್ಲಿ ಚಾಪೆಯ ಮೇಲೆ ಮಧ್ಯದ ಬಾಟಲಿಗಳು, ಇಸ್ಪಿಟ್ ಎಲೆಗಳ ರಾಶಿಯೇ ಬಿದ್ದಿತ್ತು. ಸೋಮವಾರ ಬೆಳಗಿನ ಸಮಯದಲ್ಲಿ ರೈತರು ಭೇಟಿ ನೀಡಿದಾಗ ಭವನದಲ್ಲಿ ಯಾವೋಬ್ಬ ಗ್ರಾಮ ಲೆಕ್ಕಿಗರು ಇರಲಿಲ್ಲ. ಇದನ್ನು ಕಂಡ ರೈತರು ಗ್ರಾಮ ಲೆಕ್ಕಿಗರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com