ನಿಲ್ಲದ ಮುಷ್ಕರ; ತಪ್ಪದ ಅಲೆದಾಟ

Updated on: 

ಯಾದಗಿರಿ: ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿ ವಿವಿಧ ಬೇಡಿಕೆ ಮುಂದಿಟ್ಟುಕೊಂಡು ನಡೆಸುತ್ತಿರುವ ಮುಷ್ಕರ ನಾಲ್ಕನೇ ದಿನವಾದ ಸೋಮವಾರವೂ ಮುಂದುವರಿದಿದೆ. ಇದರಿಂದ ಜಿಲ್ಲಾದ್ಯಂತ ಬಡ ರೋಗಿಗಳು ಆಸ್ಪತ್ರೆ ಅಲೆಯುತ್ತಿದ್ದರೂ ಆರೋಗ್ಯ ಸೇವೆ ಮಾತ್ರ ಸಿಗದೇ ನರಕಯಾತನೆ ಅನುಭವಿಸುತ್ತಿದ್ದಾರೆ.
  ಇಲ್ಲಿಯ ಜಿಲ್ಲಾ ಆಸ್ಪತ್ರೆಯ ಬಾಗಿಲು ಹಾಕಲಾಗಿದ್ದು, ಮಾಹಿತಿ ನೀಡುವವರೂ ಇಲ್ಲ. ಆದ್ದರಿಂದ ಜಿಲ್ಲೆಯ ದೂರದ ಊರುಗಳಿಂದ ಬಂದವರು ನಾಲ್ಕಾರು ಗಂಟೆಗಳ ಕಾಲ ವೈದ್ಯರಿಗಾಗಿ ಕಾದು ಸುಸ್ತಾಗಿ ವಾಪಸ್ ಹೋಗುತ್ತಿರುವ ಘಟನೆ ನಡೆದಿದೆ. ಇದೇ ರೀತಿ ತಾಲೂಕು ಆಸ್ಪತ್ರೆಗಳಲ್ಲೂ ಮುಂದುವರಿದಿದೆ. ಬಡ ಹಾಗೂ ಅನಕ್ಷರಸ್ಥ ಜನರು ಯಾವ ಕಾರಣಕ್ಕಾಗಿ ಆಸ್ಪತ್ರೆ ಬಾಗಿಲು ಹಾಕಿದೆ ಎನ್ನುವುದೂ ಗೊತ್ತಾಗದೆ ವೈದ್ಯರಿಗಾಗಿ ಕಾಯುತ್ತಿರುವುದನ್ನು ನೋಡಿದರೆ ಬೇಸರ ತರುವಂತಿದೆ.
 'ಕಣ್ಣಿನ ಆಪರೇಶನ್ ಮಾಡಿದ್ರು, ಸೋಮವಾರ ಬಂದು ತೋರಿಸಿಕೊಂಡುಛ ಹೋಗು ಅಂತ ವೈದ್ಯರು ತಿಳಿಸಿದ್ದರು. ಆದರೆ ಇಂದು ಆಸ್ಪತ್ರೆಗೆ ಬಾಗಿಲು ಹಾಕಲಾಗಿದೆ' ಎಂದು ಶಹಾಪುರ ತಾಲೂಕಿನ ಹಾಲಗೇರಾದಿಂದ ಇಲ್ಲಿಯ ಸಿವಿಲ್ ಆಸ್ಪತ್ರೆಗೆ ಆಗಮಿಸಿ ಕಾಯುತ್ತಿದ್ದ ವೃದ್ಧೆ ಶರಣಮ್ಮ ಹೇಳಿದರು.
  ಮಗುವಿಗೆ ಎರಡು ದಿನದಿಂದ ತೀವ್ರ ಜ್ವರ ಬಂದಿದ್ದು, ಆಸ್ಪತ್ರೆಗೆ ಬಂದರೆ ವೈದ್ಯರೇ ಇಲ್ಲ ಎಂದು ಮತ್ತೊಬ್ಬ ಮಹಿಳೆ ಹೇಳಿದರು. ವೈದ್ಯರಿಗಾಗಿ ಕಾದು ಸುಸ್ತಾಗಿ ಅಲ್ಲೇ ಮಲಗಿದ್ದ ದೃಶ್ಯಗಳೂ ಇಲ್ಲಿಯ ಸಿವಿಲ್ ಆಸ್ಪತ್ರೆ ಆವರಣದಲ್ಲಿ ಕಂಡುಬಂತು. ತುರ್ತು ಸೇವೆಯೂ ಸಿಗದೇ ಸಾರ್ವಜನಿಕರು ಪರದಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com