ಸಾರ್ವಜನಿಕ ಬಳಕೆಗೆ ಶೌಚಾಲಯ ಮುಕ್ತ

Updated on: 

ಯಾದಗಿರಿ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಿರ್ಮಿಸಿದ್ದ ಶೌಚಾಲಯವನ್ನು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ ಸೋಮವಾರ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದರು.
  ಫೆ. 5ರಂದು 'ಕನ್ನಡಪ್ರಭ' ಪ್ರಕಟಿಸಿದ್ದ 'ಜಿಲ್ಲಾಡಳಿತದಿಂದಲೇ ಇಬ್ಬಗೆ ನೀತಿ' ಎಂಬ ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಜಮಾದಾರ, ಶೌಚಾಲಯ ಪರಿಶೀಲಿಸಿದರು. ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದು ತಕ್ಷಣವೇ ಶೌಚಾಲಯಕ್ಕೆ ಹಾಕಿದ್ದ ಬೀಗ ತೆರೆಯುವಂತೆ ಸೂಚಿಸಿದರು. ತಮ್ಮ ಕಚೇರಿ ಆವರಣದಲ್ಲೇ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೂ ಇದುವರೆಗೆ ಅರಿವಿಗೆ ಬಂದಿರಲಿಲ್ಲ. ಬೇರೆ ಊರುಗಳಿಂದ ಕಚೇರಿ ಕಾರ್ಯಕ್ಕಾಗಿ ಬರುವ ಮಹಿಳೆಯರು, ವೃದ್ಧರು ಸೇರಿದಂತೆ ಎಲ್ಲರಿಗೂ ಶೌಚಾಲಯ ಇಲ್ಲದಿದ್ದರೆ ಸಮಸ್ಯೆಯಾಗುತ್ತದೆ. ಇಲ್ಲಿ ಶೌಚಾಲಯ ಇದ್ದರೂ ಅದರ ನಿರ್ವಹಣೆ ಆಗುತ್ತಿಲ್ಲ. ಬೀಗ ಹಾಕಿಟ್ಟರೆ ಪ್ರಯೋಜನವಿಲ್ಲ. ಸಮಸ್ಯೆ ಬಗೆಹರಿಸಿ ಅದನ್ನು ಸಾರ್ವಜನಿಕರು ಉಪಯೋಗಿಸುವಂತಾಗಬೇಕು. ಆದ್ದರಿಂದ ತಕ್ಷಣ ಶೌಚಾಲಯ ಮುಕ್ತಗೊಳಿಸುವುದು ಅಗತ್ಯವಿದೆ ಎಂದು ಹೇಳಿದರು.
ಸಮಸ್ಯೆ ಪರಿಹಾರಕ್ಕೆ ಸೂಚನೆ: ಪೌರಾಯುಕ್ತ ಮುನೀರ್ ಅಹ್ಮದ್, ನಗರ ಯೋಜನಾಧಿಕಾರಿ ಬಂಡೆಪ್ಪ ಆಕಳ ಅವರನ್ನು ಸ್ಥಳಕ್ಕೆ ಕರೆಸಿದರು. ಶೌಚಾಲಯಕ್ಕೆ ನೀರಿನ ಸಮಸ್ಯೆಯಿರುವುದು ಗಮನಕ್ಕೆ ಬಂತು. ಜತೆಗೆ ನಿರ್ವಹಣೆಗೆ ಅನುಕೂಲವಾಗುವಂತೆ ಪ್ಯೆಂಡ್ ಯೂಸ್ ಮಾದರಿಯಲ್ಲಿ ಆರಂಭಿಸುವ ಕುರಿತು ಚರ್ಚಿಸಲಾಯಿತು. ಜತೆಗೆ ಶೌಚಾಲಯ ನಿರ್ವಹಣೆ ನೋಡಿಕೊಳ್ಳಲು ವ್ಯಕ್ತಿಯನ್ನು ನಿಯೋಜಿಸುವಂತೆ ಸೂಚಿಸಿದರು.
  ಶೌಚಾಲಯ ಕಾಮಗಾರಿ ನಿರ್ವಹಿಸಿದ ಭೂಸೇನಾ ನಿಗಮದ ಅಧಿಕಾರಿ ಮಾತನಾಡಿ, ಹಿಂದಿನ ಜಿಲ್ಲಾಧಿಕಾರಿಗಳ ಮನವಿ ಮೇರೆಗೆ ಸಂಸ್ಥೆಯಿಂದ ಶೌಚಾಲಯ ನಿರ್ಮಿಸಲಾಗಿದೆ. ಮಹಿಳಾ ಸಿಬ್ಬಂದಿ ಅನುಕೂಲಕ್ಕಾಗಿ ತಕ್ಷಣ ಕಾಮಗಾರಿ ಮುಗಿಸಿ ಹಸ್ತಾಂತರಿಸುವಂತೆ ತಿಳಿಸಿದ್ದರು. ಅದರಂತೆ ಎಲ್ಲ ಕಾಮಗಾರಿ ಪೂರ್ಣಗೊಳಿಸಿ ಹಸ್ತಾಂತರ ಮಾಡಿದ್ದೇವೆ. ಆದರೆ ಇಲಾಖೆಗೆ ಇನ್ನೂ 3 ಲಕ್ಷ ಬಾಕಿ ಬರಬೇಕಿದೆ. ಆದ್ದರಿಂದ ತಾವು ಈ ಬಗ್ಗೆ ಪರಿಶೀಲಿಸಿ ಹಣ ಮಂಜೂರಾತಿ ಮಾಡಿಕೊಡಬೇಕೆಂದು ಕೋರಿದರು.
ನೀರು ಪೂರೈಕೆಗೆ ತಾಕೀತು: ಸ್ಥಳದಲ್ಲೇ ಇದ್ದು ಶೌಚಾಲಯಕ್ಕೆ ನೀರಿನ ಪೂರೈಕೆ ಕಾರ್ಯ ಕೈಗೊಳ್ಳುವಂತೆ ಪೌರಾಯುಕ್ತರಿಗೆ ಡಿಸಿ ಸೂಚಿಸಿದರು. ನಿರ್ವಹಣೆಗಾಗಿ ಸೂಕ್ತ ವ್ಯಕ್ತಿಯನ್ನು ನಿಯೋಜಿಸುವಂತೆ ಅವರು ಸೂಚಿಸಿದರು. ಇದರಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಿರ್ಮಾಣವಾಗಿಯೂ ಬಳಕೆಯಾಗದ ಶೌಚಾಲಯ ಸೋಮವಾರ ಮುಕ್ತಗೊಂಡಿತು. ಪತ್ರಿಕೆ ಮಾಡಿದ ವರದಿಗೆ ಸ್ಥಳದಲ್ಲಿದ್ದ ಸಾರ್ವಜನಿಕರು ಮುಕ್ತಕಂಠದಿಂದ ಶ್ಲಾಘಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com