ಗುಲ್ಬರ್ಗ: ನಗರದ ಆಳಂದ ನಾಕಾದಿಂದ ಎಸ್.ಬಿ. ಕಾಲೇಜು ಜಿಎಲ್ಎಸ್ಆರ್ ಬರುವ ಕುಡಿವ ನೀರು ಸರಬರಾಜಿನ ಮುಖ್ಯ ಕೊಳವೆ ಮಾರ್ಗದಲ್ಲಿ ಲಾಲಗಿರಿ ಕ್ರಾಸ್ನಲ್ಲಿ ಸೋರಿಕೆ ಉಂಟಾಗುತ್ತಿದೆ.
ಪೈಪ್ ಒಡೆದು ಬದಲಾಯಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಈ ಪ್ರಯುಕ್ತ ಫೆಬ್ರುವರಿ 14 ರಿಂದ 16 ರವರೆಗೆ ಈ ಮುಂದೆ ತೋರಿಸಿರುವ ಬಡಾವಣೆಗಳಿಗೆ ಕುಡಿವ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಲಿದೆ. ಪ್ರಯುಕ್ತ ಈ ಮುಂದೆ ತೋರಿಸಿರುವ ಬಡಾವಣೆಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಕೋರಿದ್ದಾರೆ.
ವಿದ್ಯಾನಗರ, ರಾಮನಗರ, ಶಾಂತಿನಗರ, ಸಿ.ಐ.ಬಿ.ಕಾಲೋನಿ, ಘಾಟಗೆ ಲೇಔಟ್, ಕಾಂತಾ ಕಾಲೋನಿ, ಸ್ಟೇಷನ್ ಅಪ್ಪರ ಲೈನ್, ಐವಾನ್-ಇ-ಶಾಹಿ, ಮಹಾವೀರನಗರ, ಗೋದುತಾಯಿ ನಗರ, ವೆಂಕಟೇಶನಗರ, ವಸಂತನಗರ, ಇಂದಿರಾನಗರ, ಆನಂದನಗರ, ವಿಠ್ಠಲನಗರ, ಖುಬಾಪ್ಲಾಟ್, ಶಾಮಸುಂದರನಗರ, ಬ್ರಹ್ಮಪುರ, ಪಂಚಶೀಲನಗರ, ಸಂಗಮೇಶ್ವರ ಕಾಲೋನಿ, ಮಹಾಲ್ಕಷ್ಮೀ ಲೇಔಟ್, ಕೊಂಡೆದಗಲ್ಲಿ, ವಡ್ಡರಗಲ್ಲಿ, ಬೋರಾಬಾಯಿನಗರ, ಕೃಷ್ಣಾನಗರ ಮತ್ತು ಕೀರ್ತಿನಗರ.