ಗುಲ್ಬರ್ಗ: ತಾಲೂಕಿನ ಶರಣಸಿರಸಗಿ ಗ್ರಾಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಕಾಲೋನಿಯ ದ್ವಾರ ಬಾಗಿಲು ಉದ್ಘಾಟನಾ ಸಮಾರಂಭ ಫೆ.13 ರಂದು ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಪ್ರಿಯಾಂಕ ಖರ್ಗೆ ಉದ್ಘಾಟಿಸುವರು. ಕಾಂಗ್ರೆಸ್ ರಾಜ್ಯ ಯುವ ಮುಖಂಡ ಡಾ. ಅಜಯಸಿಂಗ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವರು. ಶಾಸಕಿ ಅರುಣಾ ಸಿ. ಪಾಟೀಲ್ ರೇವೂರ್ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ಶಿವರಾಜ ಎನ್. ಬಾಸಗಿ, ಖಣದಾಳ ಜಿಪಂ ಸದಸ್ಯೆ ಅನಿತಾ ಪವನಕುಮಾರ ವಳಕೇರಿ ತಾಪಂ ಸದಸ್ಯೆ ಅನ್ನಪೂರ್ಣ ಗೋವಿಂದ ರೆಡ್ಡಿ, ಗ್ರಾಪಂ ಅಧ್ಯಕ್ಷ ಶಬ್ಬೀರ್ ಪಟೇಲ್ ಲಾಡ್ಲೆ ಪಟೇಲ್ ಆಗಮಿಸಲಿದ್ದಾರೆ. ಹಣಮಂತ ಯಳಸಂಗಿ ಆಗಮಿಸಲಿದ್ದಾರೆಂದು ಅಧ್ಯಕ್ಷ ಪರಸಪ್ಪ ಎಂ. ತೆಲ್ಲೂರ ತಿಳಿಸಿದ್ದಾರೆ.