ತಿಂಥಣಿ ಮೌನೇಶ್ವರ ಜಾತ್ರೆ 20ರಿಂದ

Updated on

ಸುರಪುರ: ತಿಂಥಣಿ ಮೌನೇಶ್ವರ ಜಾತ್ರಾ ಮಹೋತ್ಸವ ಫೆ. 20ರಿಂದ ಆರಂಭವಾಗಲಿದೆ ಎಂದು ತಿಂಥಣಿ ದೇವಸ್ಥಾನ ಸಮಿತಿ ಅಧ್ಯಕ್ಷರು ಹಾಗೂ ಸಹಾಯಕ ಆಯುಕ್ತರೂ ಆಗಿರುವ ಬಿ.ಪಿ. ವಿಜಯ್ ಹೇಳಿದ್ದಾರೆ. 20ರಂದು ದಶಮಿ ಆಚರಣೆಯೊಂದಿಗೆ ಜಾತ್ರೆಗೆ ಚಾಲನೆ ದೊರಕಲಿದೆ. ಅಂದೇ ಪಲ್ಲಕ್ಕಿ ಉತ್ಸವ ತಿಂಥಣಿಗೆ ಪಯಣ ಬೆಳಸಲಿದೆ. 21ರಂದು ಏಕಾದಶಿ ಆಚರಣೆ, ಸಂಜೆ ದೇವಸ್ಥಾನದಲ್ಲಿ ಮಹಾಪ್ರಸಾದ ಹಮ್ಮಿಕೊಳ್ಳಲಾಗಿದೆ. 22ರಂದು ದ್ವಾದಶಿ ಪಲ್ಲಕ್ಕಿ ಪ್ರಥಮ ಸೇವಾ, 23ರಂದು ತ್ರಯೋದಶಿ ಧಾರ್ಮಿಕ ಕಾರ್ಯಕ್ರಮಗಳು, ಜಾವಳ, ಸಾಮೂಹಿಕ ಉಪನಯನ ಮತ್ತು ರಾತ್ರಿ ಸಂಗೀತ ಸೇವೆ ಜರುಗಲಿದೆ. ಫೆ.24 ರಂದು ಚತುರ್ದಶಿ ಪೂಜೆ, ಸಂಜೆ 5ಗಂಟೆಗೆ ರಥೋತ್ಸವ ಮತ್ತು ಪಲ್ಲಕ್ಕಿ ಮಹಾಸೇವೆ, ಫೆ. 25ರಂದು ಧೂಳಗಾಯಿ ಮತ್ತು ಗುಹಾಪ್ರವೇಶದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com