ಶಹಾಪುರ: ಪಟ್ಟಣದ ಚಿಕ್ಕಮಠ ಶಾಲಾ ಆವರಣದಲ್ಲಿ ಉಜ್ಜೈನಿ ಮಹಾಪೀಠದ ಶ್ರೀಗಳ ಮಂಗಲಾಶೀರ್ವಾದ ಮತ್ತು ಸಿದ್ದಲಿಂಗ ಶಿವಾಚಾರ್ಯರು ಹಿರೇಮಠ ಆಳಂದ ಇವರ ಕೃಪಾಶೀರ್ವಾದದಿಂದ ಫೆ.14ರಿಂದ ಮಾ.9ರವರೆಗೆ ದಿನ ಸಂಜೆ 7 ಗಂಟೆಗೆ ಲಿಂಗಪುರಾಣ ಕಾರ್ಯಕ್ರಮ ಹಮ್ಮಿಕೊಂಡಿದೆ.
ಫೆ.25ರಿಂದ ಮಾ.9ರವರೆಗೆ ಬೆಳೆಗ್ಗೆ ಮತ್ತು ಸಂಜೆ ಕೋಟಿ ಶಿವನಾಮಸ್ಮರಣೆ, ಸಾಮೂಹಿಕ ಇಷ್ಟಲಿಂಗ ಪೂಜೆ ಆಯೋಜಿಸಿದೆ ಈ ಎಲ್ಲಾ ಕಾರ್ಯಕ್ರಮಗಳು ವೇದಮೂರ್ತಿ ಮೃತ್ಯಂಜಯ ಶಾಸ್ತ್ರಿಗಳು ಚಿಕ್ಕಮಠ ಇವರ ಸಂಕಲ್ಪದಂತೆ ನಡೆಯುತ್ತಿದ್ದು ಭಕ್ತರು ಜ್ಞಾನದಾಸೋಹ, ಭಕ್ತಿ ಮಾರ್ಗದ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಸಮಸ್ತ ಭಕ್ತ ಮಂಡಳಿ ಮನವಿ ಮಾಡಿದೆ.