ಆಳಂದ: ಬೀದರ್ ನಗರ ಅಂಬೇಡ್ಕರ್ ಸರ್ಕಲ್ ಹತ್ತಿರದ ಬರೀದಶಾಹಿ ಪ್ಯಾಲೇಸ್ ಸಭಾ ಭವನದಲ್ಲಿ ಫೆ.19ರಂದು ಸಂಜೆ 5 ಗಂಟೆಗೆ ಭಾರತ ಮುಕ್ತಿ ಮೋರ್ಚಾ ಆಶ್ರಯದಲ್ಲಿ ಏರ್ಪಡಿಸಿದ್ದ ಶಿವಾಜಿ ಮಹಾರಾಜರ ಹುಟ್ಟುಹಬ್ಬದ ಅಂಗವಾಗಿ ಬಹಿರಂಗ ಪ್ರಭೋದನ ಸಮ್ಮೇಳನಕ್ಕೆ ಈ ಭಾಗದ ಕಾರ್ಯಕರ್ತರಿಗೆ ಆಹ್ವಾನಿಸಲಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಭಾರತ ಮುಕ್ತಿಮೋರ್ಚಾ ತಾಲೂಕು ಗೌರವಾಧ್ಯಕ್ಷ ಎಸ್.ಡಿ. ಸಾಗರಶೆಟ್ಟಿ ಅವರು, ಅರ್ಥಪೂರ್ಣಪ್ರಭೋದನ ಸಮ್ಮೇಳನಕ್ಕೆ ಪ್ರಗತಿಪರ ಚಿಂತಕರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದ್ದಾರೆ.