ಜೇವರ್ಗಿ: ಸಮಾಜದಲ್ಲಿ ಹಲವು ವರ್ಗದ ಜನರು ಸಮಸ್ಯೆಗಳ ನಡುವೆ ಬದುಕು ಸಾಗಿಸುತ್ತಿದ್ದಾರೆ. ಅವರ ಸಮಸ್ಯೆಗಳ ಪರಿಹಾರಕ್ಕೆ ಆಯಾ ಸಮುದಾಯದ ಸಂಘಟನೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿದಾಗ ಆ ಸಮುದಾಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಬೆಳವಣಿಗೆ ಹೊಂದಲು ಸಾಧ್ಯ ಎಂದು ನ್ಯಾಯವಾದಿ ಬಸವರಾಜ ಕಂದಗಲ್ ಹೇಳಿದರು.
ಪಟ್ಟಣದ ಸಜ್ಜನ ಕಲ್ಯಾಣ ಮಂಟಪದಲ್ಲಿ ಈಕರಸಾ ಸಂಸ್ಥೆಯ ತಾಲೂಕ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಸಂವಿಧಾನ ಬದ್ಧ ಹಕ್ಕು ಪಡೆದುಕೊಳ್ಳಲು ಸಂಘಗಳ ಅವಶ್ಯಕತೆ ಇದ್ದು. ಆನಿಟ್ಟಿನಲ್ಲಿ ಸಂಘಟನೆಗಳ ಪಾತ್ರ ಮುಖ್ಯವಾಗಿರುತ್ತದೆ. ಸಂಘಟನೆಯಲ್ಲಿ ಮಾತ್ರ ಆ ಶಕ್ತಿ ಇದೆ. ಬೇರೆ ಜಾತಿಯವರ ಹಕ್ಕುಗಳಿಗೆ ದಕ್ಕೆಯಾಗದ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದರು.
ಬಿಡುಗಡೆ: ಗಂವ್ಹಾರ ವಿಎಸ್ಎಸ್ಎನ್ ಸೋಸೈಟಿ ಕಾರ್ಯದರ್ಶಿ ಕಲ್ಯಾಣಕುಮಾರ ಸಂಗಾವಿ ಗಂವ್ಹಾರ ಅವರನ್ನು ಸನ್ಮಾನಿಸಲಾಯಿತು, 17ನೇ ಶತಮಾನದ ಶ್ರೇಷ್ಠ ವಚನಕಾರ ಷಣ್ಮುಖ ಶಿವಯೋಗಿಗಳ ಭಾವಚಿತ್ರವಿರುವ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ಲಕ್ಷ್ಮೀಕಾಂತ ಹರವಾಳ ಪ್ರಾಸ್ತಾವಿಕ ಮಾತನಾಡಿದರು. ಈಶಾನ್ಯ ವಲಯ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಸಂಗಮನಾಥ ರಬಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬಸವಕೇಂದ್ರ ಅಧ್ಯಕ್ಷ ಶರಣಬಸವ ಕಲ್ಲಾ, ತಾಲೂಕ ವೀರಶೈವ ಲಿಂಗಾಯತ ನೌಕರರ ಸಂಘದ ತಾಲೂಕ ಅಧ್ಯಕ್ಷ ಕಾಶೀನಾಥ ಇಮ್ಮಣ್ಣಿ, ಸರ್ಕಾರಿ ಪ್ರೌಢಶಾಲಾ ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಬಸವರಾಜ ಕಲ್ಲಾ, ಶಿವಣಗೌಡ ಹಂಗರಗಿ ಭಾಗವಹಿಸಿದ್ದರು. ಎಸ್.ಬಿ.ದಲ್ಲು, ಅಮೃತ ಕಿರಣಗಿ, ಪ್ರಭು ಅವಂಟಿ, ಕಲ್ಲಣಗೌಡ ಕೆಲ್ಲೂರ, ಸುರೇಶ ದೇಸಾಯಿ, ಬಸವರಾಜ ಅಫಜಲ್ಪುರಕರ್ ಆಗಮಿಸಿದ್ದರು. ನಾಗಣ್ಣ ಮದ್ರಕಿ, ನೀಲಕಂಠ ಗುರುಮೂರ್ತಿ, ಗುರುಲಿಂಗಯ್ಯ ಘಂಠಿಮಠ, ಗುರಣ್ಣ ವಸ್ತಾರಿ, ದಾನಪ್ಪಗೌಡ ಹಳಿಮನಿ, ಸುಭಾಷ ಸಜ್ಜನ, ಬಸವರಾಜ ಆಂದೋಲಾ ಇದ್ದರು.