ಸುರಪುರ: ಸೂರ್ಯ ನಮಸ್ಕಾರ ಮತ್ತು ಯಜ್ಞಗಳು ಶಾಸ್ತ್ರೋಕ್ತವಾಗಿದ್ದು ವೈಜ್ಞಾನಿಕ ಮತ್ತು ಶಾರೀರಿಕವಾಗಿಯೂ ತುಂಬಾ ಪ್ರಯೋಜನಕಾರಿಯಾಗಿವೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡರಾದ ಚನ್ನಮಲ್ಲಪ್ಪ ರೊಟ್ನಡಗಿ ಹೇಳಿದರು.
ಇಲ್ಲಿಯ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ವನವಾಸಿ ಕಲ್ಯಾಣಿ ಸಮಿತಿ ಹಮ್ಮಿಕೊಂಡಿದ್ದ ಸೂರ್ಯ ನಮಸ್ಕಾರ ಮತ್ತು ಸೂರ್ಯ ಯಜ್ಞ ಹೋಮ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿರಿಯ ಸಾಹಿತಿ ಎ.ಕೃಷ್ಣ ಸುರಪುರ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ, ಸೂರ್ಯ ನಮಸ್ಕಾರ ಮತ್ತು ಯಜ್ಞದ ವಿವರಣೆ ಹೇಳಿದರು. ವಿಹಿಂಪ ಅಧ್ಯಕ್ಷ ಪಿಡ್ಡನಾಯಕ ಪ್ಯಾಪ್ಲಿ ಹೋಮ, ಪೂಜೆಯಲ್ಲಿ ಪಾಲ್ಗೊಂಡಿದ್ದರು. 50ಕ್ಕೂ ಹೆಚ್ಚು ಶಿಬಿರಾರ್ಥಿಗಳು ಸಾಮೂಹಿಕ ಸೂರ್ಯ ನಮಸ್ಕಾರ ಮಾಡಿದರು.
ಪ್ರಮುಖರಾದ ಪ್ರಹ್ಲಾದರಾವ ಕುಳಗೇರಿ, ವೆಂಕಟೇಶ ಶಾವಂತಗಿರಿ, ಶಂಕರಗೌಡ ಪಾಟೀಲ್, ರಾಜಶೇಖರ ಮಠ, ಮಹೇಶಕುಮಾರ ಹಳ್ಳದ, ಶ್ರೀನಿವಾಸಾಚಾರ್ಯ, ಶ್ರೀನಿವಾಸ ಕಟ್ಟಿಮನಿ, ಉಮಾಕಾಂತ ಪಂಚಮಗಿರಿ ಹಲವರಿದ್ದರು. ಸಂಗೀತ ಮತ್ತು ಐಶ್ವರ್ಯ ಪ್ರಾರ್ಥನೆ ಗೀತೆ ಹಾಡಿದರು. ಶ್ರೀಹರಿರಾವ ಆದೋನಿ ನಿರೂಪಿಸಿದರು. ಗುರುನಾಥರೆಡ್ಡಿ ಶೀಲವಂತ ವಂದಿಸಿದರು.