'ಅರುಣ'ರಾಗ; ಒಲವು

Updated on: 

ಗುಲ್ಬರ್ಗ: ನಗರದ ಜೈ ಕರ್ನಾಟಕ ರಕ್ಷಣಾ ವೇದಿಕೆಯ ಕೇಂದ್ರ ಕಚೇರಿಯಲ್ಲಿ ಅರುಣಕುಮಾರ ಪಾಟೀಲ್ ಅವರ ಹಿತೈಷಿಗಳ ಸಭೆ ನಡೆಯಿತು.
ಸಭೆಯಲ್ಲಿ ಗುಲ್ಬರ್ಗ ದಕ್ಷಿಣ ಮತಕ್ಷೇತ್ರದ ಎಲ್ಲ ಸಮಾಜ ಮುಖಂಡರು ಭಾಗವಹಿಸಿ ಅರುಣಕುಮಾರ ಪಾಟೀಲ್ ಅವರ ಮುಂದಿನ ರಾಜಕೀಯ ನಡೆ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಲಾಯಿತು. ಮೇಳಕುಂದಿ ಗ್ರಾಮದ ನಿವೃತ್ತ ಡಿವೈಎಸ್‌ಪಿ ಬಸವರಾಜ ಹಾಗರಗಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಎಲ್ಲ ಪಕ್ಷಗಳು ಜಾತಿಯ ರಾಜಕಾರಣದಲ್ಲಿ ತೊಡಗಿರುವುದರಿಂದ ಅಭಿವೃದ್ಧಿ ಪರ ರಾಜಕಾರಣಕ್ಕಾಗಿ ಅರುಣಕುಮಾರ ಪಾಟೀಲ್ ಅವರನ್ನು ರಾಜಕೀಯಕ್ಕೆ ತರುವುದು ಅನಿವಾರ್ಯ. ಗುಲ್ಬರ್ಗ ನಗರ ಹಾಗೂ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳೇ ಅವರಿಗೆ ಶ್ರೀರಕ್ಷೆಯಾಗಲಿವೆ ಎಂದು ಹೇಳಿದರು.
ಶರಣಬಸಪ್ಪ ಪಾಟೀಲ್ ಜವಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಲಿತ ಮುಖಂಡ ಸುಭಾಷ ಫರಹತಾಬಾದ್, ಮುಸ್ಲಿಂ ಮುಖಂಡ ದುಬೈ ಸೇಠ ಮಾತನಾಡಿದರು. ಸಭೆಯಲ್ಲಿ ಶಂಕರಗೌಡ ಮಾಲಿಪಾಟೀಲ್, ಜಗನ್ನಾಥ ಪಟ್ಟಣಶೆಟ್ಟಿ, ಶ್ರೀಕಾಂತ ಜಾಧವ, ರಮೇಶ ಪಾಟೀಲ್, ಸಂಗಪ್ಪ ಜೋಳದಪ್ಪಿ, ಶಂಭುಲಿಂಗ ಪಾಟೀಲ್, ಭೀಮರಾವ ಪಾಟೀಲ್ ಮೇಳಕುಂದಾ, ಜೈಭೀಮ, ದೇಶಮುಖ ಮಂಗಲಗಿ, ಸಚಿನ್, ಗುಂಡಪ್ಪ, ಷಣ್ಮುಖಯ್ಯಸ್ವಾಮಿ, ಮಲಕಣ್ಣ ಮಳ್ಳಿ, ಸಂತೋಷ ಸೇರಿದಂತೆ ಇನ್ನಿತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com