'ಶಿಕ್ಷಕರ ಕೈಯಲ್ಲಿ ದೇಶದ ಭವಿಷ್ಯ'

Updated on: 

ಬೀದರ್: ನಮ್ಮ ದೇಶದ ಶಿಕ್ಷಣ ದಾರಿ ತಪ್ಪುತ್ತಿದೆ. ಶಿಕ್ಷಣ ವ್ಯವಸ್ಥೆ ಬದಲಾಗಬೇಕಾದರೆ ಪಾಠ ಮಾಡುವ ಪ್ರಾಧ್ಯಾಪಕರ ಶ್ರಮ ಹಾಗೂ ಶ್ರದ್ಧೆಯಿಂದ ಕಾರ್ಯ ಮಾಡಬೇಕಾಗುತ್ತದೆ ಎಂದು ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಅಭಿಪ್ರಾಯಪಟ್ಟರು.
 ನಗರದ ಕರ್ನಾಟಕ ಕಾಲೇಜಿನಲ್ಲಿ ಭಾನುವಾರ ವಿಕಾಸ ಆಕಾಡೆಮಿಯಿಂದ ಪ್ರಾಧ್ಯಾಪಕರು ಹಾಗೂ ಆಡಳಿತ ಮಂಡಳಿಯವರಿಗಾಗಿ ಹಮ್ಮಿಕೊಂಡಿದ್ದ ಜ್ಞಾನ ಸಿಂಚನ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಮಾತನಾಡಿ, ಈ ದೇಶದ ಭವಿಷ್ಯ ಶಿಕ್ಷಕರು, ಪ್ರಾಧ್ಯಾಪಕರ ಕೈಯಲ್ಲಿದೆ. ಕೇವಲ ಪಠ್ಯಕ್ರಮಕ್ಕೆ ಅಂಟಿಕೊಳ್ಳದೇ ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳು, ನೀತಿ ಪಾಠಗಳನ್ನು ಶ್ರದ್ಧೆಯಿಂದ ಹೇಳಿಕೊಟ್ಟರೆ ಮಾತ್ರ ದೇಶದಲ್ಲಿ ಬದಲಾವಣೆ ಕಾಣಬಹುದು ಎಂದು ಬೇರೆ ಬೇರೆ ದೇಶಗಳಲ್ಲಿ ತಂತ್ರಜ್ಞಾನ ಬೆಳೆಯುತ್ತಿರುವ ಬಗ್ಗೆ ವಿವರಿಸಿದರು.
  ಪ್ರಾಂಶುಪಾಲರಾದ ಪ್ರೊ. ವಿಜಯಕುಮಾರ ಗಂಗು ಸ್ವಾಗತಿಸಿದರು. ಜಿಲ್ಲಾ ವಿಕಾಸ ಅಕಾಡೆಮಿ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಆರ್‌ಇ ಸಂಸ್ಥೆಯ ಉಪಾಧ್ಯಕ್ಷ ಬಿ.ಜಿ. ಶೆಟಕಾರ, ಕಾರ್ಯದರ್ಶಿ ಬಸವರಾಜ ಜಾಬಶೆಟ್ಟಿ, ಪ್ರೊ. ಬಿ.ಆರ್. ಕೊಂಡಾ, ಡಾ. ಚೆನ್ನಬಸಪ್ಪ ಹಾಲಹಳ್ಳಿ, ಪಾಂಡುರಂಗರಾವ ಸಫಾರೆ, ಪ್ರೊ. ಎಸ್.ವಿ. ಕಲ್ಮಠ, ಪ್ರೊ. ಎಸ್.ಬಿ. ಪಾಟೀಲ್, ಪ್ರೊ. ಶಿವಕುಮಾರ ಉಪ್ಪೆ, ಚನ್ನಬಸವ ಹೆಡೆ, ಸಹಸಂಚಾಲಕ ಸಂಗಮೇಶ ನಾಸಿಗಾರ ವಿವಿಧ ಕಾಲೇಜಿನ ಪ್ರಾಧ್ಯಾಪಕರು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಪದಾಧಿಕಾರಿಗಳು ಭಾಗವಹಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com