ಇಂದು ಬಸವ ಬೆಳಕು ಕಾರ್ಯಕ್ರಮ
ಶಹಾಪುರ: ಪಟ್ಟಣದ ಬಸವ ಮಾರ್ಗ ಪ್ರತಿಷ್ಠಾನ ಸತ್ಯಂಪೇಟೆ ವತಿಯಿಂದ ಫೆ.25ರಂದು ಸಂಜೆ 6-30ಕ್ಕೆ ತಿಂಗಳ ಬಸವ ಬೆಳಕು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಾರಂಭದಲ್ಲಿ ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೆ ಎಂಬ ವಿಷಯ ಕುರಿತು ರಾಜ್ಯ ಜನವಾದಿ ಮಹಿಳಾ ಸಂಘಟನೆಯ ಕೆ.ನೀಲಾ ಗುಲ್ಬರ್ಗ ಅವರು ಅನುಭಾವ ನೀಡಲಿದ್ದಾರೆ. ಬಸವ ಜ್ಯೋತಿಯನ್ನು ಶರಣೆ ಬಸ್ಸಮ್ಮಗೌಡ್ತಿ ಗಿರೆಪ್ಪಗೌಡ ಬಾಣತಿಹಾಳ ಬೆಳಗಲಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಬಸವರಾಜ ಪಡುಕೋಟೆ ಪಾಲ್ಗೊಳ್ಳಲಿದ್ದು, ಅಧ್ಯಕ್ಷತೆಯನ್ನು ಡಾ. ಚಂದ್ರಶೇಖರ ಸುಬೇದಾರ ವಹಿಸಲಿದ್ದಾರೆ. ಶರಣಕುಮಾರ ಜಾಲಹಳ್ಳಿ, ಭೀಮರಾಯ ನುಚ್ಚಿನ ಹಾಗೂ ಮೈಲಾರಪ್ಪ ಸಗರ ಅವರಿಂದ ವಚನ ಪ್ರಾರ್ಥನೆ ಜರುಗಲಿದೆ. ಈ ಸಂದರ್ಭದಲ್ಲಿ ದೊಂಡಿಬಾ ತುಳಜಾರಾಮ ಬಾಸುತ್ಕರ್ ಅವರನ್ನು ಸನ್ಮಾನಿಸಲಾಗುವುದೆಂದು ಬಸವ ಮಾರ್ಗ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ತಿಳಿಸಿದ್ದಾರೆ.
ಯಶಸ್ಸಿಗೆ ನಿರಂತರ ಪ್ರಯತ್ನ ಅಗತ್ಯ: ತೆಗ್ಗಿನಮನಿ
ಶಹಾಪುರ: ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿ ಜೀವನವು ಸವಾಲಿನಿಂದ ಕೂಡಿದ್ದು. ಅದನ್ನು ಎದುರಿಸಲು ಸಕರಾತ್ಮಕ ಧೋರಣೆ ಬೆಳಸಿಕೊಳ್ಳಬೇಕು. ನಿರಂತರ ಪ್ರಯತ್ನದಿಂದ ಮುನ್ನಡೆದರೆ ಖಂಡಿತವಾಗಿ ಯಶಸ್ಸು ದೊರೆಯುತ್ತದೆ ಎಂದು ಶಹಾಪುರ ಸರ್ಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಎಂ.ಆರ್. ತೆಗ್ಗಿನಮನಿ ಅಭಿಪ್ರಾಯಪಟ್ಟರು. ತಾಲೂಕಿನ ಚಾಮನಾಳ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಸಗರ ಪಪೂ ಕಾಲೇಜಿನ ಪ್ರಾಚಾರ್ಯ ಸುರೇಶ ತುತಾರೆ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವರ್ಷದ ಪಠ್ಯಕ್ರಮಗಳನ್ನು ಮನನ ಮಾಡಿಕೊಳ್ಳಲು ನಿಗದಿತ ವೇಳಾಪಟ್ಟಿ ಹಾಕಿಕೊಳ್ಳುವುದರೊಂದಿಗೆ ಸ್ವಸಾಮರ್ಥ್ಯದ ಮೇಲೆ ನಂಬಿಕೆ ಹೊಂದಿರಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಗುರುಲಿಂಗಪ್ಪ ದೇಸಾಯಿ ಮಾತನಾಡಿ, ಪಿಯುಸಿ ಹಂತ ವಿದ್ಯಾರ್ಥಿಗಳ ಜೀವನದಲ್ಲಿ ಅತೀ ಮಹತ್ವದ ತಿರುವು ಎಂಬುವದನ್ನು ಮರೆಯಬಾರದು. ಪರೀಕ್ಷೆ ಸಮೀಪಿಸುತ್ತಿದ್ದಂತೆ ವಿದ್ಯಾರ್ಥಿಗಳಲ್ಲಿ ಆತಂಕ, ಒತ್ತಡ ಹೆಚ್ಚಾಗುವುದು ಸಹಜ. ಪ್ರೌಢಶಾಲೆ ಮುಖ್ಯಾಧ್ಯಾಪಕ ಹೈಯಾಳಪ್ಪ ಸಜ್ಜನ, ಉಪನ್ಯಾಸಕರಾದ ಶಶಿಕಾಂತ ಚಾಮನಾಳಕರ್, ಮೋನಯ್ಯ ಗೋನಾಲ್, ಸಂತೋಷ ಜುನ್ನಾ, ಬಿ.ಎಂ. ಪೂಜಾರಿ, ಅಯ್ಯಣ್ಣ ಇನಾಮದಾರ್, ಸಿ.ಎಸ್. ಭೀಮರಾಯ, ಗ್ರಾಪಂ ಅಧ್ಯಕ್ಷ ಶರಣಗೌಡ ಬಿರಾದಾರ ಇದ್ದರು. ಲಾಲ್ ಅಹ್ಮದ್ ಕಾಡಂಗೇರಾ ಸ್ವಾಗತಿಸಿ ಶ್ರುತಿ ಹಿರೇಮಠ ನಿರೂಪಿಸಿ ಹಣಮಂತ್ರಾಯ ಚಾಮನಾಳ ವಂದಿಸಿದರು.