ಪಲ್ಸ್ ಪೋಲಿಯೋ: ಶೇ.73ರಷ್ಟು ಸಾಧನೆ

Updated on: 

ಯಾದಗಿರಿ: ಜಿಲ್ಲೆಯಲ್ಲಿ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಪ್ರಥಮ ದಿನವಾದ ಜ.20ರಂದು ಬೂತ್ ಮಟ್ಟದಲ್ಲಿ 1,36,845 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಶೇ.73ರಷ್ಟು ಸಾಧನೆ ಮಾಡಲಾಗಿದೆ.   ಜಿಲ್ಲೆಯ ಶಾಹಾಪುರ, ಸುರಪುರ ಹಾಗೂ ಯಾದಗಿರಿ ತಾಲೂಕಿನ ಗ್ರಾಮಾಂತರ ಪ್ರದೇಶದ ಒಟ್ಟು 1,13,406 ಮಕ್ಕಳಿಗೆ ಲಸಿಕೆ ಹಾಕಿ ಶೇ. 76.66ರಷ್ಟು ಸಾಧನೆ ಮಾಡಲಾಗಿದೆ. ಅದರಂತೆ ನಗರ ಪ್ರದೇಶದಲ್ಲಿ 23,439 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿ ಶೇ.59 ರಷ್ಟು ಸಾಧನೆ ಮಾಡಲಾಗಿದೆ. ಜಿಲ್ಲಾದ್ಯಂತ ನಗರ ಮತ್ತು ಗ್ರಾಮೀಣ ಸೇರಿ ಒಟ್ಟು 1,36,845 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿ ಶೇ. 73ರಷ್ಟು ಸಾಧನೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಲ್ಲಿಕಾರ್ಜುನ ಮುಕ್ಕಾ ತಿಳಿಸಿದ್ದಾರೆ.
ಪೋಲಿಯೋ ಮುಕ್ತವಾಗಲು
ನಾಗರಿಕರ ಸಹಕಾರ ಅವಶ್ಯ
ಸುರಪುರ: ಪಲ್ಸ್ ಪೋಲಿಯೋ ಲಸಿಕೆ ಮಕ್ಕಳ ಜೀವ ರಕ್ಷಕವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ಪಾಲಕ- ಪೋಷಕರು ಮಗುವಿಗೆ ತಪ್ಪದೇ ಲಸಿಕೆ ಹಾಕಿಸಬೇಕು, ಭಾರತ ಪೋಲಿಯೋ ಮುಕ್ತ ರಾಷ್ಟ್ರ ಎಂದು ಕರೆಯಿಸಿಕೊಳ್ಳಲು ಎಲ್ಲರ ಸಹಕಾರ ಅಗತ್ಯ ಎಂದು ಪುರಸಭೆ ಅಧ್ಯಕ್ಷ ಚಂದ್ರಶೇಖರ ಜಡಿಮರಳ್ ಕರೆ ನೀಡಿದರು. ಹಸನಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಮಗುವಿಗೆ ಪೋಲಿಯೋ ಹನಿ ಹಾಕುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು. ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಫೀ ಉಜ್ಜಮಾ ಮಾತನಾಡಿದರು. ಶಿವಶರಣಪ್ಪ ಹೆಡಗಿನಾಳ, ಗೋವಿಂದರಾಜ ಶಹಪುರಕರ್, ಡಾ.ಸ್ಮೀತಾ ಅಂಬುರೆ, ಪ್ರಾಣೇಶ ಜೋಷಿ, ರಾಜೇಶ ಭಟ್, ಅಬ್ದುಲ್ ರಫೀಕ್, ನಾಗವೇಣಿ, ಹುಲಗಮ್ಮ, ಬಶೀರಾಬಾನು, ವಸುಮತಿ, ವಾಣಿಶ್ರೀ ಇದ್ದರು.
ಅಪಘಾತ: ನಿವೃತ್ತ ಕೃಷಿ ಅಧಿಕಾರಿ ಸಾವು
ಶಹಾಪುರ: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಮೇಲೆ ತೆರಳುತ್ತಿದ್ದ ನಿವೃತ್ತ ಕೃಷಿ ಅಧಿಕಾರಿ, ತಾಲೂಕಿನ ಮೂಡಬೂಳ ಗ್ರಾಮದ ಧನಂಜಯ ಕುಲಕರ್ಣಿ(72) ಮಂಗಳವಾರ ಮೃತಪಟ್ಟಿದ್ದಾರೆ. ಇಲ್ಲಿಗೆ ಸಮೀಪದ ಭೀ.ಗುಡಿ ಬಳಿಯ ಬೋರುಕಾ ಸೇತುವೆ ಮೇಲೆ ನಡೆದ ಅಪಘಾತದಲ್ಲಿ ಅವರು ಮೃತಪಟ್ಟಿದ್ದಾರೆ. ಮುಡಬೂಳದಿಂದ ಶಹಾಪುರಕ್ಕೆ ಬರುತ್ತಿದ್ದ ವೇಳೆ ಯಾವುದೋ ವಾಹನ ಡಿಕ್ಕಿ ಹೊಡೆದಿದೆ. ಮೃತರು ಇಲ್ಲಿಯ ಹಿರಿಯ ವಕೀಲರಾಗಿರುವ ಭಾಸ್ಕರರಾವ ಮೂಡಬೂಳ ಅವರ ಸಹೋದರ. ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ವರ್ಗದವರನ್ನು ಅವರು ಅಗಲಿದ್ದಾರೆ. ಭೀಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತಾಪ: ಕುಲ್ಕರ್ಣಿ ಅವರ ಆಕಸ್ಮಿಕ ನಿಧನಕ್ಕೆ ಶಾಸಕರಾದ ಶರಣಬಸಪ್ಪಗೌಡ, ಗುರುಪಾಟೀಲ ಶಿರವಾಳ, ಶರಣಪ್ಪ ಸಲಾದಪುರ, ಆರ್.ಚನ್ನಬಸ್ಸು ವಕೀಲರು, ಅಮಾತೆಪ್ಪ ಕಂದಕೂರ, ಮರಿಗೌಡ ಹುಲ್ಕಲ್, ಚಂದ್ರಶೇಖರ ಆರಬೋಳ, ಈರಣ್ಣಾ ದೇಸಾಯಿ, ಶಂಕರಗೌಡ, ಗೋಪಣ್ಣಾ ಹವಲ್ದಾರ, ಬಸವಗೌಡ, ಆರ್.ಎಂ. ರೆಡ್ಡಿ, ಮಲ್ಲಿಕಾರ್ಜುನ ಮುದ್ನೂರು, ಮಲ್ಲಿಕಾರ್ಜುನ ಅಂಗಡಿ, ತ್ರಿಶೂಲ ಮುಡಬೂಳ, ವಸಂತಸುರಪುರ, ಮಲ್ಲಯ್ಯ ಪೋಲಂಪಲ್ಲಿ ಇತರರು ಸಂತಾಪ ಸೂಚಿಸಿದ್ದಾರೆ.
---
'ಉತ್ತಮ ಶಿಕ್ಷಣ ನೀಡಿ'
ಯಾದಗಿರಿ: ಸಮಾಜದ ಬಂಧುಗಳು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ಟೋಕರಿ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ ಹೇಳಿದರು. ತಾಲೂಕಿನ ಯರಗೋಳ ದಲ್ಲಿ ಪ್ರಿಯಂಕಾ ಪ್ರೌಢಶಾಲಾವರಣದಲ್ಲಿ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ಸಮಾಜದ ಬಾಂಧವರು ಒಗ್ಗಟ್ಟಿನಿಂದ ಶ್ರಮಿಸಿದಾಗ ಅಭಿವೃದ್ಧಿ ಸಾಧ್ಯ ಎಂದರು. ಸಂಸ್ಥೆಯ ಉಪಾಧ್ಯಕ್ಷ ಆಂಜನೇಯ ಮಾತನಾಡಿ, ನಿಜಶರಣ ಅಂಬಿಗರ ಚೌಡಯ್ಯನವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಬಾಳಬೇಕೆಂದರು. ದೇವಿಂದ್ರಪ್ಪ, ಸಾಯಬಣ್ಣ ಚಿಕ್ಕಬಾನ, ಕವಿತಾ ಹಿರೇಮಠ, ಚಂದ್ರಕಲಾ, ಸರಸ್ವತಿ, ದುರ್ಗಮ್ಮ, ಚಂದ್ರಕಲಾ ಇತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com