ವಾಡಿ, ಶಹಾಬಾದ್‌ಗಳಲ್ಲಿ ಗಣರಾಜ್ಯೋತ್ಸವ

Updated on: 

ಗುಲ್ಬರ್ಗ: ವಾಡಿ ಪಟ್ಟಣದ ಜೆಸ್ಕಾಂ ಕಚೇರಿ, ಅಂಚೆ ಕಚೇರಿ, ಪೊಲೀಸ್ ಠಾಣೆ, ಪುರಸಭೆ, ಕಮರವಾಡಿ, ಸೂಲಹಳ್ಳಿ, ರೈಲು ನಿಲ್ದಾಣ ಹಾಗೂ ವಿವಿಧ ಶಾಲಾ-ಕಾಲೇಜುಗಳಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.
 ಅಳ್ಳೋಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರು ವಿಜಯಕುಮಾರ್ ಟೆಂಗಳಿ ಧ್ವಜಾರೋಹಣ ನೆರವೇರಿಸಿದರು. ರಾಜಶೇಖರ್ ಡೋಣಗಾಂವ ಅತಿಥಿಗಳಾಗಿದ್ದರು.  ಶಿಕ್ಷಕರಾದ ಶಕುಂತಲಾ, ರೇಣುಕಾ, ರೇಖಾ ಪಿ.ಎಚ್, ಹಾಲೇಶ ಎಸ್, ದಾವಲ್‌ಮಲೀಕ್, ಜ್ಯೋತಿ, ಶರಣಮ್ಮ, ಶಿಲ್ಪಾರಾಣಿ, ಶೀಲಾ ಪಾಟೀಲ್, ಸೀತಾ ಹೇರೂರ ಇದ್ದರು. ಗ್ರಾಮದಲ್ಲಿ ಮಕ್ಕಳಿಂದ ಪ್ರಭಾತ ಫೇರಿ ನಡೆಸಲಾಯಿತು.
ಪುರಸಭೆ: ಪಟ್ಟಣದ ಪುರಸಭೆಯಲ್ಲಿ ಅಧ್ಯಕ್ಷೆ ಹಸೀನಾ ಬೇಗಂ ಖುರೇಶಿ ಧ್ವಜಾರೋಹಣ ಮಾಡಿದರು. ಮುಖ್ಯಾಧಿಕಾರಿ ರಮೇಶ ಪಟ್ಟೇದಾರ ಹಾಗೂ ವಿವಿಧ ವಾರ್ಡಗಳ ಸದಸ್ಯರು, ಸಿಬ್ಬಂದಿ ಪಾಲ್ಗೊಂಡಿದ್ದರು.
ಗುಲ್ಬರ್ಗ/ಶಹಾಬಾದ್: ಶಹಾಬಾದ್ ನಗರಸಭೆ ಕಾರ್ಯಾಲಯದಲ್ಲಿ ಅಧ್ಯಕ್ಷ ಮಹ್ಮದ ರಫೀಕ್ ಕಾರೋಬಾರಿ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷೆ ಗೀತಾ ಬೊಗುಂಡಿ, ನಗರಸಭೆ ಸದಸ್ಯರು, ಪೌರಾಯುಕ್ತರು, ಸಿಬ್ಬಂದಿ ಇದ್ದರು.
ಡಿವೈಎಸ್‌ಪಿ ಕಚೇರಿಯಲ್ಲಿ ಡಿವೈಎಸ್‌ಪಿ ಎಂ.ವಿ. ಸೂರ್ಯವಂಶಿ ಧ್ವಜಾರೋಹಣ ನೆರವೇರಿಸಿದರು. ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ರಘು ಎನ್. ಧ್ವಜಾರೋಹಣ ನೆರವೇರಿಸಿದರು. ಪಿಎಸ್‌ಐ ಸುನೀಲಕುಮಾರ್ ನಾಯಕ, ಎಎಸ್‌ಐ ಚಂದ್ರಕಾಂತ, ಕಾಶಿನಾಥ, ಸಿಬ್ಬಂದಿ ಇದ್ದರು. ಉಪ ತಹಸೀಲ್ದಾರ್ ಕಚೇರಿಯಲ್ಲಿ ಉಪ ತಹಸೀಲ್ದಾರ್ ಮಾಣಿಕಪ್ಪ ಧ್ವಜಾರೋಹಣ ನೆರವೇರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com