ಸೇಡಂ: ನಗರದಲ್ಲಿ ಶುಕ್ರವಾರ ಅದ್ಧೂರಿಯಾಗಿ ಈದ್-ಎ-ಮಿಲಾದ್ ಉನ್ ನಬಿ ಹಬ್ಬವನ್ನು ಆಚರಿಸಲಾಯಿತು. ಸಾವಿರಾರು ಮುಸ್ಲಿಮರನ್ನೊಳಗೊಂಡ ಜುಲೂಸ್(ಮೆರವಣಿಗೆ) ಜಿ.ಕೆ. ರಸ್ತೆಯಿಂದ ಬಸ್ ನಿಲ್ದಾಣ ಮಾರ್ಗವಾಗಿ ಮುಖ್ಯರಸ್ತೆ, ಬಡಿ ಮಸ್ಜಿದ್ನಲ್ಲಿ ಸಮಾಪ್ತಿಗೊಂಡಿತು. ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಮಹ್ಮದ್ ಮುನೀಬ್, ಸತೀಶರೆಡ್ಡಿ ಪಾಟೀಲ್ ರಂಜೋಳ, ಸೈಯದ್ ಜಾಕೀರ್, ಅಬ್ದುಲ್ ಗಫೂರ್, ಜಾವೀದ್ ನಿರ್ನಾವಿ, ಮೈನೋದ್ದಿನ್ ಕಾಳಗಿ, ಅಫ್ಜಲ್ ಖಾನ್, ಚೋಟುಮಿಯಾ, ನವಾಜ್ ಗೌಂಡಿ, ಮುಜೀಬ್, ರಶೀದ್, ಮೈನು, ಅಬ್ದುಲ್ ಸಲೀಮ್, ಸಾಬೀರ ಪಾಶಾ, ಅಬ್ದುಲ್ ರಹೀಮ್ ಇದ್ದರು.