ಇಂದು ಆರೋಗ್ಯ ತಪಾಸಣೆ ಶಿಬಿರ

Updated on: 

ಗುಲ್ಬರ್ಗ: ಹಿರಿಯ ನಾಗರಿಕರಿಗೆ ಜ.29ರಂದು ಬೆಳಗ್ಗೆ 10.30 ಗಂಟೆಗೆ ಶಿವರುದ್ರ ಟ್ರಸ್ಟ್ ವತಿಯಿಂದ ನಗರದ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ಎಲುಬಿನ ಉಚಿತ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಎಂ.ಎಸ್. ಮಹಾಗಾಂವಕರ್ ತಿಳಿಸಿದ್ದಾರೆ. ಗುಲ್ಬರ್ಗ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಶರಣಬಸಪ್ಪ ಬೆಣ್ಣೂರ ಶಿಬಿರ ಉದ್ಘಾಟಿಸಲಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಡಾ. ಕೆ.ಎಸ್. ಮಾಲಿಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಮೃತರಾವ ಪಾಟೀಲ್, ನಳಿನಿ ಮಹಾಗಾಂವಕರ್, ಎಲುಬು ಮತ್ತು ಕೀಳುಗಳ ತಜ್ಞ ಡಾ. ಎಸ್.ಎಸ್. ಗುಬ್ಬಿ, ಪಿಜಿಯೋಥೆರಪಿಸ್ಟ್ ಡಾ. ಸಂಗಮೇಶ ಹತ್ತಿ, ಮಕ್ಕಳ ತಜ್ಞ  ಡಾ. ಶರಣಕುಮಾರ ಕೆ. ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಮಹಿಳೆಯರಿಗೆ ಚಿಕಿತ್ಸಾ ಶಿಬಿರ
ಗುಲ್ಪರ್ಗ: ಜೇವರ್ಗಿಯಲ್ಲಿ ಧರ್ಮಸಿಂಗ್ ಪೌಂಡೇಷನ್ ವತಿಯಿಂದ ಜ.29ರಂದು ಮಹಿಳೆಯರಿಗಾಗಿ ವಿಶೇಷ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಅತೀ ಬಿಳಿ ಸೆರಗು, ಮೂತ್ರ ನಿಯಂತ್ರಣ ಕಷ್ಟ, ಬಿಳಿಮುಟ್ಟು, ಕಿಬ್ಬೊಟ್ಟೆ ನೋವು, ಬೆನ್ನು ನೋವು, ಸೊಂಟ ನೋವು, ತಿಂಗಳು ಮಧ್ಯೆ ಮುಟ್ಟು, ನಿಯಂತ್ರಣವಿಲ್ಲದ ಕೆಂಪು ಮುಟ್ಟು, ಲೈಂಗಿಕ ಸಂಪರ್ಕದ ನಂತರ ಕೆಂಪು ಮುಟ್ಟು, ಸ್ವಚ್ಛತೆಯನ್ನು ಪಾಲಿಸದಿರುವುದು ಮುಂತಾದ ತೊಂದರೆಗಳಿಗೆ ಚಿಕಿತ್ಸೆ ನೀಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಬೇಕೆಂದು ಫೌಂಡೇಷನ್ ಅಧ್ಯಕ್ಷ ಡಾ. ಅಜಯಸಿಂಗ್ ಕೋರಿದ್ದಾರೆ.
ಗೈರು ಹಾಜರಿ; ಸೇವೆಯಿಂದ ವಜಾ
ಗುಲ್ಬರ್ಗ: ಸುರಪುರ ತಾಲೂಕಿನ ಮಾರಲಭಾವಿ ಗ್ರಾಮಲೆಕ್ಕಿಗ ಗುರುಲಿಂಗಯ್ಯ ಅವರನ್ನು ಸರ್ಕಾರಿ ಕೆಲಸದಲ್ಲಿ ಅನಧಿಕೃತವಾಗಿ ಧೀರ್ಘಕಾಲದವರೆಗೆ ಗೈರು ಹಾಜರಾದ ಪ್ರಯುಕ್ತ ಸರ್ಕಾರಿ ಸೇವೆಯಿಂದ ವಜಾ ಮಾಡಿ ಗುಲ್ಬರ್ಗ ಜಿಲ್ಲಾಧಿಕಾರಿ ಹಾಗೂ ಶಿಸ್ತುಪ್ರಾಧಿಕಾರಿ ಆದೇಶ ಹೊರಡಿಸಿದ್ದಾರೆ. ಸದರಿಯವರನ್ನು ಕರ್ನಾಟಕ ನಾಗರಿಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1975ರ ಅನ್ವಯ ತಕ್ಷಣದಿಂದಲೇ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ವಜಾ ಮಾಡಿ ಆದೇಶ ಹೊರಡಿಸಿದ್ದಾರೆ.
ಅನಧಿಕೃತ ಗೈರುಹಾಜರಿ: ಸೂಚನೆ
ಗುಲ್ಬರ್ಗ: ಗುಲ್ಬರ್ಗ ತಾಲೂಕಿನ ಕಮಲಾಪುರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಯಲ್ಲಿ 3.6. 2012 ರಿಂದ ಪ್ರಥಮ ದರ್ಜೆ ಸಹಾಯಕರಾದ ಬಸವರಾಜ ಪಾಳೇಕರ್ ಮತ್ತು 1. 7. 2012 ರಿಂದ ದ್ವಿತಿಯ ದರ್ಜೆ ಸಹಾಯಕ ಶ್ರೀಧರ ಕುಲಕರ್ಣಿ ಅವರು ಅನಧಿಕೃತವಾಗಿ ಕರ್ತವ್ಯಕ್ಕೆ ಗೈರು ಹಾಜರಾಗಿದ್ದಾರೆ. ಸದರಿಯವರಿಗೆ ಇದು ಅಂತಿಮ ಸೂಚನೆಯಾಗಿದ್ದು ಕೂಡಲೇ ಕಚೇರಿ ಕೆಲಸಕ್ಕೆ ಹಾಜರಾಗುವಂತೆ ಕಮಲಾಪುರ ಡಯಟ್ ಪ್ರಾಚಾರ್ಯರು ತಿಳಿಸಿದ್ದಾರೆ. ತಪ್ಪಿದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದೆಂದು ಸೂಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com