ಗುಲ್ಬರ್ಗ: ಅಫಜಲ್ಪುರ ತಾಲೂಕಿನ ದೇಸಾಯಿ ಕಲ್ಲೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಹೆಣ್ಣು ಮಕ್ಕಳ ಮಾರ್ಗದರ್ಶಿ ಕೇಂದ್ರದ ವತಿಯಿಂದ ಕಾನೂನು ಅರಿವು-ನೆರವು ಕಾರ್ಯಕ್ರಮ ನಡೆಯಿತು.
ಅರುಣಾ ಪ್ರಶಾಂತಕುಮಾರ ಉಪನ್ಯಾಸ ನೀಡಿದರು. ಮಹೆಬೂಬ್ ದೇವರಮನಿ, ಕಾಲೇಸಾಬ್ ಭಾಗವಾನ್, ಶಾರದಾ ಚಂದ್ರಕಾಂತ ರಾಠೋಡ, ಸಂಗೀತಾ ಅಶೋಕ ರಾಠೋಡ, ಜುಮ್ಮಣ್ಣ ಮುಕಂದಾರ, ಶಾಲೆಯ ಶಿಕ್ಷಕರು, ಸಿಬ್ಬಂದಿ ಇದ್ದರು.
ಶಾಲೆಯ ಮುಖ್ಯಗುರು ಚಂದ್ರಕಾಂತ ರಾಠೋಡ ನೇತೃತ್ವ ವಹಿಸಿದ್ದರು. ಸೋಮಶೇಖರ ಹಂಚಿನಾಳ ಅಧ್ಯಕ್ಷತೆ ವಹಿಸಿದ್ದರು. ಅಶೋಕ ಸಿತಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಬುಜರುಕ್ ಕಾರ್ಯಕ್ರಮ ನಿರೂಪಿಸಿದರು. ಮೋನಯ್ಯ ಸ್ವಾಮಿ ಸ್ವಾಗತಿಸಿದರು.