ಚಿಂಚೋಳಿ: ತಾಲೂಕಿನ ದೇಗಲಮಡಿ ಗ್ರಾಮದಲ್ಲಿ ಆಕಳು ಮತ್ತು ಕರು ಕಳ್ಳತನ ಪರಾರಿಯಾಗುತ್ತಿದ್ದ ಕಳ್ಳನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಪ್ರಸಂಗ ನಡೆಯಿತು.
ದೇವೀಂದ್ರ ತಂದೆ ಶರಣಪ್ಪ ಕಾಶವಾರ್ ಎಂಬಾತ ಬಂಧಿತ ಆರೋಪಿ. ದೇಗಲಮಡಿ ಗ್ರಾಮದ ಶಾಮರಾವ ಕಲ್ಲಪ್ಪ ಮೂಲಗೆ ಎಂಬುವವರ ದನದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಹಾಲು ಕರೆಯುವ ಆಕಳು ಮತ್ತು ಕರುವನ್ನು ಭಾನುವಾರ ರಾತ್ರಿ 10.30ರ ಸುಮಾರಿಗೆ ಕಳ್ಳತನ ಮಾಡಿ ಹೊಡೆದುಕೊಂಡು ಹೋಗುತ್ತಿದ್ದಾಗ ಆಕಳು ಮತ್ತು ಕರುವಿನ ಕೂಗಾಟ ಕೇಳಿದ ಕೂಡಲೇ ಮನೆಯವರು ಹೊರಗೆ ಓಡಿ ಬಂದು ಕಳ್ಳನನ್ನು ಹಿಡಿದು ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ಇಬ್ಬರು ಕಳ್ಳರು ಪರಾರಿಯಾಗಿದ್ದಾರೆ.
ಆರೋಪಿ ದೇವೇಂದ್ರಪ್ಪ ಎಂಬಾತನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.