ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ವದ್ದು: ಗುರುಲಿಂಗ

ಯಾದಗಿರಿ: ತಾಲೂಕಿನ ಸೈದಾಪುರದ ಮಲ್ಹಾರ ಕಾರಡ್ಡಿ ಬಸವಂತರಾಯ ಮತ್ತು ಸಿದ್ದಪ್ಪ ಸ್ಮಾರಕ ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಸಮಾರೋಪ ಸಮಾರಂಭ ಜರುಗಿತು.  
ಅತಿಥಿಗಳಾಗಿ ಮುಖ್ಯಗುರು ಲಿಂಗಾರೆಡ್ಡಿ ನಾಯಕ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಬಹುಮುಖ್ಯವಾಗಿದೆ. ಅವರಲ್ಲಿ ಸೇವಾ ಮನೋಭಾವನೆಯಂತಹ ಗುಣಗಳನ್ನು ಬೆಳಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಜಿ.ಎಂ. ಗುರುಪ್ರಸಾದ ಮಾತನಾಡಿ, ಒಂದು ವಾರದವರೆಗಿನ ನಿರಂತರವಾದ ಶಿಬಿರದಲ್ಲಿ ಶ್ರಮದಾನ, ಉಪನ್ಯಾಸದಂತಹ ಕಾರ್ಯಕ್ರಮಗಳು ನಡೆದು ಬಂದವು. ಅವುಗಳಲ್ಲಿ ಭಾಗವಹಿಸಿದ ನಿಮಗೆ ಉತ್ತಮ ಗುಣ ಬೆಳಸಿಕೊಳ್ಳಲು ನೆರವು ನೀಡಿದಂತಾಗಿದೆ ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಶರಣಿಕಕುಮಾರ ದೋಖಾ, ಗ್ರಾಪಂ ಅಧ್ಯಕ್ಷೆ ರಾಧಮ್ಮ ಭಾಗಪ್ಪ, ಗೋವಿಂದಪ್ಪ ಕಣೇಕಲ್, ವಿರುಪಣ್ಣಗೌಡ ಇದ್ದರು. ಶರೀಫ ಭಾಷಾ ಸ್ವಾಗತಿಸಿದರು. ರಾಜೇಶ್ವರಿ ನಿರೂಪಿಸಿದರು. ಮಹೇಶ ವಂದಿಸಿದರು. ಕಾನೂನು ಅರಿವು, ಆರೋಗ್ಯ, ಪರಿಸರ, ಕೃಷಿ, ಸೇವಾ ಮನೋಭಾವನೆಯಂತಹ ವಿಚಾರಗಳ ಬಗ್ಗೆ ಚರ್ಚೆಗಳು ಜರುಗಿದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com