ಶಹಾಬಾದ್: ಮಳೆಗಾಲದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗ ಕಂಟಕವಾಗಿ ಕಾಡುತ್ತದೆ. ನೋವು ತುಂಬಿದ ಕಾಲುಗಳಿಂದ ನಡೆಯಲಾಗದೆ ಪಶುಗಳು ಹಿಂಸೆ ಅನುಭವಿಸುತ್ತವೆ ಎಂದು ಪಶು ವೈದ್ಯ ಡಾ. ನೀಲಪ್ಪ ಪಾಟೀಲ ಹೇಳಿದರು. ಲಾಡ್ಲಾಪುರ ಗ್ರಾಮದಲ್ಲಿ ಎಐಡಿವೈಒ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಉಚಿತ ಪಶು ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು. ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ನಿಂಗಣ್ಣ ಜಂಬಗಿ, ಪಶು ವೈದ್ಯ ಡಾ. ಪಂಪಣ್ಣ ಸಜ್ಜನ, ಡಾ. ಅಶೋಕ ಪಾಟೀಲ ಮಾತನಾಡಿದರು. ಗ್ರಾಪಂ ಸದಸ್ಯ ವಿಶ್ವನಾಥ ಗಂದಿ, ಸಾಬಯ್ಯ ಗುತ್ತೇದಾರ, ಸಾಬಣ್ಣ ಊಟಿ, ಶಾಮಸುಂದರ ರೆಡ್‌ಸನ್, ಎಐಡಿವೈಒ ಗ್ರಾಮ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಗಂದಿ ಇದ್ದರು. ಸಿದ್ದರಾಜ ಮಲಕಂಡಿ ವಂದಿಸಿದರು.
Advertisement