ಗುಲ್ಬರ್ಗ: ನಗರದ ಕನ್ನಡ ಭವನದಲ್ಲಿ ಇತ್ತೀಚೆಗೆ ಕರ್ನಾಟಕ ರಕ್ಷಣಾ ವೇದಿಕೆಯ ಮಾಸ ಪತ್ರಿಕೆಯ ಅಡಿಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪುರಸ್ಕಾರಗಳನ್ನು ಪಡೆದ ಪತ್ರಕರ್ತರಿಗೆ ಸತ್ಕಾರ ನಡೆಯಿತು.
ಸಂಘದ ಅಧ್ಯಕ್ಷ ಮಂಜುನಾಥ ನಾಲವಾರಕರ್ ಈ ಕಾಯಕ್ರಮದ ಉಸ್ತುವಾರಿ ಹೊತ್ತಿದ್ದರು. ಸಮಾರಂಭದಲ್ಲಿ ಮಾತನಾಡಿದ ಎಂಎಲ್ಸಿ ಅಮರನಾಥ ಪಾಟೀಲ್, ಪತ್ರಕರ್ತರು, ಹೋರಾಟಗಾರರು ಹಾಗೂ ಜನನಾಯಕರು ಸಮಾಜಮುಖಿಯಾದಲ್ಲಿ ಅಂತಹ ಪರಿಸರದಲ್ಲಿ ಬದಲಾವಣೆ ಗಾಳಿ ಬೀಸುತ್ತದೆ ಎಂದರು.
ಕಸಾಪ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಮಾತನಾಡಿ, ಪತ್ರಕರ್ತರೊಬ್ಬರು 100 ಮಂದಿ ಜೊತೆ ಸ್ನೇಹ ಗಳಿಸಿದರೆ ಸಾವಿರ ಜನರೊಂದಿಗೆ ದ್ವೇಷ ಕಟ್ಟಿಕೊಂಡಿರುತ್ತಾರೆ. ಆದಾಗ್ಯೂ ಪತ್ರಕರ್ತರಾದವರ ಶ್ರಮ ಗುರುತಿಸಿ ಮಾಡುತ್ತಿರುವ ಸತ್ಕಾರ ಶ್ಲಾಘನೀಯ ಎಂದರು. ಸರಡಗಿಯ ರೇವಣಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು. ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು. ನಾಗಲಿಂಗಯ್ಯ ಮಠಪತಿ ವಂದಿಸಿದರು. ವಿಶ್ವಗಂಗಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಶಂಕರ ಬಿರಾದಾರ, ಕಸಾಪ ಕಾರ್ಯದರ್ಶಿಗಳಾದ ಬಿ.ಎಚ್. ನೀರ್ಗುಡಿ, ಸುರೇಶ ಬಡಿಗೇರ್, ಕರವೇ ಕಾರ್ಯಕರ್ತರು ಇದ್ದರು.
Advertisement