ಅಫಜಲ್ಪುರ: ಬಿಜಾಪುರ ಜಿಲ್ಲೆಯ ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು ಹೆಚ್ಚಿಸುವಂತೆ ನ್ಯಾಯಾಲಯ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಆಲಮಟ್ಟಿಯಿಂದ ಅಮರ್ಜಾ ನದಿಗೆ ಮತ್ತು ಅದರ ವ್ಯಾಪ್ತಿಯ 11 ಬ್ಯಾರೇಜ್‌ಗಳಿಗೆ ನೀರು ಹರಿಸುವ ಕುರಿತು ನೀರಾವರಿ ಸಚಿವ ಎಂ.ಬಿ ಪಾಟೀಲ್ ಅವರೊಂದಿಗೆ ಚರ್ಚಿಸಲಾಗಿದ್ದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಶಾಸಕ ಮಾಲಿಕಯ್ಯ ಗುತ್ತೇದಾರ ತಿಳಿಸಿದರು.
ತಾಲೂಕಿನ ಸೊನ್ನ ಗ್ರಾಮದ ಭೀಮಾ ಸೊನ್ನ ಬ್ಯಾರೇಜ್‌ಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ಬ್ಯಾರೇಜ್ ವೀಕ್ಷಣೆ ಮಾಡಿ ಮಾತನಾಡುತ್ತ, ಸದ್ಯ ಭೀಮಾ ಬ್ಯಾರೇಜ್‌ನಲ್ಲಿ 4.02 ಮೀ. ನೀರಿದ್ದು, ಆಲಮಟ್ಟಿಯಿಂದ 4 ಟಿಎಂಸಿ ನೀರನ್ನು ನದಿಗೆ ಸೇರಿಸುವಂತೆ ಸಚಿವರೊಂದಿಗೆ ಜಿಲ್ಲೆಯ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಸೇರಿ ಯೋಜನೆಯ ಮಂಜೂರಾತಿ ಕುರಿತು ಚರ್ಚಿಸಿದ್ದಾಗಿ ತಿಳಿಸಿದರು.
11 ಬ್ಯಾರೇಜ್‌ಗಳಿಗೆ ನೀರು ತುಂಬಿಸುವುದರ ಜೊತೆಗೆ ಆಳಂದ, ಗುಲ್ಬರ್ಗ, ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಕುಡಿವ ನೀರು ಒದಗಿಸಲಾಗುವುದು. ಭೀಮಾ ನದಿಗೆ ಇನ್ನೂ 4 ಏತನೀರಾವರಿಯನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕರು ತಿಳಿಸಿದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ರೇವೂರ, ತಾಪಂ ಅಧ್ಯಕ್ಷ ಶಿವಪುತ್ರಪ್ಪ ಕರೂರ, ಉಪಾಧ್ಯಕ್ಷ ಸಾ.ಸಿ. ಬೆನಕನಳ್ಳಿ, ತಾಪಂ ಮಾಜಿ ಉಪಾಧ್ಯಕ್ಷ ಸಿದ್ದು ಹಳಗೋದಿ, ಅರವಿಂದ ಹಾಳಕಿ, ಮಣುರ ಗ್ರಾಪಂ ಅಧ್ಯಕ್ಷ ರಮೇಶ ಭಾಕೆ, ರಾಜು ಬಂಡಗಾರ, ಎಪಿಎಂಸಿ ನಿರ್ದೇಶಕ ಸಿದ್ದಯ್ಯ ಆಕಾಶಮಠ, ಗುರುಬಾಳಪ್ಪ ಜಕಾಪೂರ ಸೇರಿದಂತೆ ಇತರರು ಇದ್ದರು.
Advertisement