ಶಹಾಪುರ: ನಾರಾಯಣಪುರ ಎಡದಂಡೆ ಕಾಲುವೆಯ ಎಸ್ಬಿಸಿ, ಜೆಬಿಸಿ ಮತ್ತು ಎಂಬಿಸಿ ಬ್ರ್ಯಾಂಚ್ ವ್ಯಾಪ್ತಿಯ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದಲ್ಲದೆ ಸಾಕಷ್ಟು ಅವ್ಯವಹಾರವಾಗಿರುವುದರಿಂದ ಲೋಕಾಯಕ್ತರು ಪರಿಶೀಲಿಸಿ ತನಿಖೆ ಮಾಡಬೇಕೆಂದು ಭೀಮರಾಯನಗುಡಿಯ ಆಡಳಿತ ಕಚೇರಿ ಮುಂದೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ರೈತರ ಹಿತದೃಷ್ಟಿಯಿಂದ ಕಾಲುವೆ ನವೀಕರಣಕ್ಕಾಗಿ ಸರ್ಕಾರ ನೂರಾರು ಕೋಟಿ ರುಪಾಯಿ ಬಿಡುಗಡೆ ಮಾಡಿದ್ದು, ಭ್ರಷ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸೇರಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಕಾಮಗಾರಿಯು ಕಳಪೆಯಿಂದ ಮುಗಿಸಿದ್ದು, ಈ ಭಾಗದ ರೈತರಿಗೆ ಘೋರ ಅನ್ಯಾಯ ಮಾಡಿದ್ದಾರೆ. ತಕ್ಷಣ ಇನ್ನೂ ಬಾಕಿ ಇರಲಿರುವ ಬಿಲ್ಲುಗಳನ್ನು ತಡೆ ಹಿಡಿಯಬೇಕೆಂದು ಕರವೇ ಸಂಘಟನೆ ತಾಲೂಕು ಅಧ್ಯಕ್ಷ ಭೀಮು ಶಖಾಪುರ ಆಗ್ರಹಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ, ಸಂತೋಷ್ ಪಾಟೀಲ, ಭೀಮಾಶಂಕರ ಹತ್ತಿಕುಣಿ, ವೆಂಕಟೇಶ ಮಿಲ್ಟ್ರೀ, ಸಂಘಟನೆಯ ಮಹಿಳಾ ಅಧ್ಯಕ್ಷೆ ಶ್ರೀದೇವಿ, ಸಿದ್ದು ಹೈಯಾಳಕರ, ಸಿದ್ದು ಪಟ್ಟೇದಾರ, ರಾಜುಸಿಂಗ್, ರಾಮಲಿಂಗು, ಚಂದ್ರಕಲಾ ರವಿರಾಜ, ಶಾರದಾ ಶಾಂತಗೌಡ, ಮಲ್ಲು ಮಾಳಿಕರ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.
Advertisement