ಯಾದಗಿರಿ: ದೇಶಕ್ಕಾಗಿ ಹೋರಾಟ ನಡೆಸಿ ತಮ್ಮ ಪ್ರಾಣತ್ಯಾಗ ಮಾಡಿ ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ನಡೆಸಿದ ಮಹಾನ್ ನಾಯಕರ ಜೀವನ ಇಂದಿನ ಯುವ ಜನತೆಗೆ ಅದರ್ಶವಾಗಬೇಕಾಗಿದೆ ಎಂದು ಆಲ್ ಇಂಡಿಯಾ ಯುಟಿಯುಸಿಯ ರಾಜ್ಯ ಉಪಾಧ್ಯಕ್ಷ ಕೆ.ಸೋಮಶೇಖರ್ ತಿಳಿಸಿದ್ದರು.
ನಗರದ ಸರ್ಕಾರಿ ಪಪೂ ಕಾಲೇಜು ಆಟದ ಮೈದಾನದಲ್ಲಿ ನೇತಾಜಿ ಸುಭಾಶ್ಚಂದ್ರ ಬೋಸ್‌ರ ಜನ್ಮದಿನ ನಿಮಿತ್ತ ಎಐಡಿಎಸ್‌ಓ, ಎಐಡಿವೈಓ, ಎಐಎಂಎಸ್‌ಎಸ್ ಸಂಘಟನೆಗಳಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಜಗತ್ತಿನಲ್ಲಿ ಹುಟ್ಟು ಸಾವುಗಳು ಪ್ರತಿದಿನವೂ ಸಂಭವಿಸುತ್ತಿರುತ್ತವೆ. ಆದರೆ ಕೆಲವು ವ್ಯಕ್ತಿಗಳ ವ್ಯಕ್ತಿತ್ವ ಇಡೀ ಸಮಾಜದ ಮೇಲೆ ಗಾಢವಾದ ಪರಿಣಾಮವನ್ನು ಬೀರಿ ಜನರ ಜೀವನ ಶೈಲಿಯನ್ನೇ ಪರಿವರ್ತಿಸುತ್ತವೆ. ಅಂತಹವರು ತಮ್ಮ ಮೇರು ವ್ಯಕ್ತಿತ್ವದಿಂದ ನಮ್ಮ ನೆನಪಿನಾಳದಲ್ಲಿ ಉಳಿಯುತ್ತಾರೆ. ಮಾನವರ ಅಭಿವೃದ್ಧಿಗಾಗಿ ತಮ್ಮನ್ನೇ ಸಂಪೂರ್ಣವಾಗಿ ಸಮರ್ಪಿಸಿಕೊಂಡ ಆ ಮಹಾನ್ ಚೇತನಗಳು ಶತಮಾನಗಳು ಉರುಳಿದರೂ ಸ್ಫೂರ್ತಿದಾಯಕವಾಗಿ ಉಳಿಯುತ್ತಾರೆ ಹಾಗೂ ಪ್ರಗತಿಶೀಲ ಹೋರಾಟಗಳಿಗೆ ಪ್ರೇರಣೆಯಾಗಿ ನಿಲ್ಲುತ್ತಾರೆ ಎಂದರು.
ಸರ್ಕಾರಿ ಪಪೂ ಬಾಲಕರ ಕಾಲೇಜು ಪ್ರಾಂಶುಪಾಲರಾದ ಚಂದ್ರಕಾಂತ ಹಿಳ್ಳಿ, ಎಸ್.ಎಸ್. ಜುಗೇರಿ, ರಘುನಾಥ ರೆಡ್ಡಿ, ಶರಣಗೌಡ ಗೂಗಲ್, ವಿಜಯಕುಮಾರ್ ವೈ, ಮರಿಲಿಂಗಪ್ಪ, ಸಿದ್ದಲಿಂಗಮ್ಮ, ರಾಮು, ಸೈದಪ್ಪ, ಸಿದ್ದಮ್ಮ, ಶರಣಗೌಡ ಗೂಗಲ್, ಜಯಲಕ್ಷ್ಮಿ, ಶ್ವೇತಾ, ಬಸಮ್ಮ, ಗೌರಮ್ಮ ಸಿ.ಕೆ. ಉಪಸ್ಥಿತರಿದ್ದರು.
Advertisement