ಶಹಾಪುರ: ತಾಲೂಕಿನ ದೋರನಹಳ್ಳಿ ಬಸ್ ನಿಲ್ದಾಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ಗಳ ಮುಖಾಮುಖಿ ಡಿಕ್ಕಿಯಿಂದ ಸವಾರನೊಬ್ಬ ಮೃತಪಟ್ಟ ಘಟನೆ ನಡೆದಿದೆ. ನರಸಯ್ಯ ಹಣಮಯ್ಯ ಕಲಾಲ (30) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಮತ್ತೊಬ್ಬ ಸವಾರನಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಪಂ ಕಚೇರಿಗೆ ಕರವೇ ಮುತ್ತಿಗೆ 16ಕ್ಕೆ
ಯಾದಗಿರಿ: ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ ಹಾಗೂ ಜಿಲ್ಲೆಗೆ ಸಂಬಂಧಿಸಿದ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜು.16ರಂದು ಜಿಲ್ಲಾ ಕರವೇ ಕಾರ್ಯಕರ್ತರು ಜಿಪಂ ಕಚೇರಿ ಮುತ್ತಿಗೆ ಹಾಕಲಿದ್ದಾರೆ ಎಂದು ಜಿಲ್ಲಾಧ್ಯಕ್ಷ ಟಿ.ಎನ್. ಬೀಮುನಾಯಕ ಪತ್ರಿಕಾ ಪಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಕೂಲಿ ಕಾರ್ಮಿಕರು, ಪ್ರಗತಿಪರ ಚಿಂತಕರು, ಎಲ್ಲಾ ಸಂಘಟನೆ ಮುಖ್ಯಸ್ಥರು ಹೋರಾಟಕ್ಕೆ ಭಾಗವಹಿಸಬೇಕೆಂದು ಕೋರಿದ್ದಾರೆ. ಮರೆಪ್ಪ ನಾಯಕ ಮುಗ್ದಂಪುರ ವಾಲ್ಮೀಕಿ ನಾಯಕ ಸಂಘದ ಜಿಲ್ಲಾಧ್ಯಕ್ಷರು, ಅಶೋಕ ಕಲಾಲ ಬದ್ದೆಪಲ್ಲಿ, ಶರಣಪ್ಪ ಜಾಕನಳ್ಳಿ,
ಹಣಮಂತನಾಯಕ ಖಾನಳ್ಳಿ, ಭೀಮಾಶಂಕರ ಹತ್ತಿಕುಣಿ, ಮಲ್ಲು ವರ್ಕನಳ್ಳಿ, ಮಲ್ಲು ರಾಮಸಮುದ್ರ, ಭೀಮರಾಯ ಸುಂಗಲಕರ್ ನಾಯ್ಕಲ್, ಹಣಮಂತ ಅಚ್ಚೋಲಾ ಹೋರಾಟಕ್ಕೆ ಕೈ ಜೋಡಿಸುವಂತೆ ಕೋರಿದ್ದಾರೆ.