ವರ್ತಕರ ಪತ್ರಿಭಟನೆ

Updated on: 

ಯಾದಗಿರಿ: ರಾಜ್ಯ ಸರ್ಕಾರದ ಕರ್ನಾಟಕ ಕೃಷಿ ಮಾರಾಟ ನೀತಿ-2014 ಕಾಯಿದೆ ಜಾರಿಗೆ ವಿರೋಧಿಸಿ ಗಂಜ್ ವರ್ತಕರ ಸಂಘದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪತ್ರಿಭಟನೆ ನಡೆಸಿದರು. ಗಂಜ್ ವರ್ತಕರ ಸಂಘದ ಅಧ್ಯಕ್ಷ ಬಾಬು ದೋಖಾ ಮಾತನಾಡಿದರು.
ನೂರಾರು ವರ್ಷಗಳಿಂದಲೂ ರೈತರು ಮತ್ತು ಖರೀದಿದಾರರನ ನಡುವೆ ಅವಿನಾಭಾವ ಸಂಬಂಧವಿದೆ. ಅದನ್ನು ಮುರಿಯಲು ಸರ್ಕಾರ ಹೊರಟಿದೆ. ಮಾರಕವಾಗಿರುವ ಕಾಯಿದೆಯನ್ನು ಯಾವುದೇ ಕಾರಣಕ್ಕೂ ಅನುಷ್ಠಾನಗೊಳಿಸಲು ಬಿಡುವುದಿಲ್ಲ. ಈಗಾಗಲೇ ನೇರವಾಗಿ ನಾವು ರೈತರ ಬೆಳೆಗಳನ್ನು ಖರೀದಿ ಮಾಡುತ್ತಿದ್ದೇವೆ. ಒಂದು ವೇಳೆ ಕರ್ನಾಟಕ ಕೃಷಿ ಮಾರಾಟ ನೀತಿ ಜಾರಿಗೊಂಡರೆ ಬಹುರಾಷ್ಟ್ರೀಯ ಕಂಪನಿಗಳ ಮೂಲಕ ಖರೀದಿ ಮಾಡ ಬೇಕಾಗುತ್ತದೆ. ಇವರೊಂದಿಗೆ ಸ್ಪರ್ಧೆ ಮಾಡುವುದು ವ್ಯಾಪಾರಸ್ಥರಿಗೆ ಆಗುವುದಿಲ್ಲ ಎಂದು ಹೇಳಿದರು. ಇಂತಹ ರೈತ ವಿರೋಧಿ ಕಾಯಿದೆ ಜಾರಿಗೊಳಿಸಲು ಹೊರಟಿರುವ ಸರ್ಕಾರ ಪರೋಕ್ಷವಾಗಿ ಬಹುರಾಷ್ಟ್ರೀಯ ಕಂಪನಿಗಳಿಗೆ ರತ್ನಗಂಬಳಿ ಹಾಸುವ ಮೂಲಕ ನಮ್ಮನ್ನು ತುಳಿಯುವ ಪ್ರಯತ್ನ ಮಾಡುತ್ತಿದೆ ಎಂದು ಗಂಭೀರವಾಗಿ ಆರೋಪ ಮಾಡಿದರು.
ವರ್ತಕರ ಬೇಡಿಕೆಯನ್ನು ಸರ್ಕಾರ ಈಡೇರಿಸಲು ವಿಳಂಬ ನೀತಿ ಧೋರಣೆ ಅನುಸರಿಸಿದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ವ್ಯಾಪಾರ ವಹಿವಾಟು ಸ್ಥಗಿತಗೊಳಿಸುವ ಮೂಲಕ ಮುಷ್ಕರ ನಡೆಸಲಾಗಿತ್ತು. ಇದಲ್ಲದೇ ಎಪಿಎಂಸಿಯಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು.
ವರ್ತಕರಾದ ಮಾರುತಿ ಕಲಾಲ, ಸೋಮನಾಥ ಜೈನ್, ವಿಷ್ಣು ವ್ಯಾಸ, ಜಗನ್ನಾಥರೆಡ್ಡಿ, ಗಜೇಂದ್ರ ಹಾಗೂ ಇನ್ನಿತರ ಅನೇಕ ವರ್ತಕರು ಪತ್ರಿಭಟನೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com