ಯಾದಗಿರಿ: ರಾಜ್ಯ ಸರ್ಕಾರ ನೂತನವಾಗಿ ಜಾರಿಗೊಳಿಸಲು ಮುಂದಾಗಿರುವ ಕರ್ನಾಟಕ ಕೃಷಿ ಮಾರಾಟ ನೀತಿ 2014 ಕಾಯಿದೆ ಅನುಷ್ಠಾನ ವಿರೋಧಿಸಿ ವರ್ತಕರು ಹಮ್ಮಿಕೊಂಡಿರುವ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಗುರುವಾರ ಎಪಿಎಂಸಿ ಆವಣರದಲ್ಲಿ ವರ್ತಕರು ಸ್ವಯಂ ಪ್ರೇರಿತವಾಗಿ ತಮ್ಮ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದರು. ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ ಮತ್ತು ಬಿಜೆಪಿ ಮುಖಂಡ ವೆಂಕಟರೆಡ್ಡಿ ಮುದ್ನಾಳ ಅವರು ವರ್ತಕರಿಗೆ ಬೆಂಬಲ ಸೂಚಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅದಲ್ಲದೇ ಸರ್ಕಾರ ನೀತಿ ವಿರೋಧಿಸಿ ಕಪ್ಪು ಬಟ್ಟೆ ಪ್ರದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಬಾಬು ದೋಖಾ, ಸೋಮನಾಥ ಬೀನ್, ಪರಮಾನಂದ ರಡ್ಡಿ ಕೊಲ್ಲೂರ್, ಮಲ್ಲಿಕಾರ್ಜುನ ಕಟ್ಟಾ, ಮಾರುತಿ ಕಲಾಲ, ದಿನೇಶ್ ದೋಖಾ ಸೇರಿದಂತೆ ಮತ್ತಿತರರು ಇದ್ದರು.