ಯಾದಗಿರಿ: ದೇಶದಲ್ಲಿ ಜನಸಂಖ್ಯೆ ಮಿತಿಮೀರುತ್ತಿವುದರ ಜೊತೆಗೆ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಸಂಘ ಸಂಸ್ಥೆಗಳು ಬಡ ಜನರಿಗಾಗಿ ಉಚಿತ ಆರೋಗ್ಯ ಶಿಬಿರ ಏರ್ಪಡಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ತಮ್ಮದೆ ಆದ ಅಪಾರ ಕೊಡುಗೆ ನೀಡುತ್ತಿವೆ ಎಂದು ಸಹಾಯ ಆಯುಕ್ತ ಪರಶುರಾಮ್ ಮಾದರ್ ಶ್ಲಾಘಿಸಿದರು. ಭಾನುವಾರ ನಗರದ ವಿದ್ಯಾಮಂಗಲ ಕಾರ್ಯಲಯದಲ್ಲಿ ಮಾರವಾಡಿ ಯುವ ಮಂಚ್ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಮೂತ್ರಪಿಂಡ ತಪಾಸಣೆ ಶಿಬಿರ ಹಾಗೂ ಅಂಗವಿಕಲರಿಗೆ ತ್ರಿಚಕ್ರ ಸೈಕಲ್ ವಿತರಣೆ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ವೈದ್ಯರಾದ ಡಾ. ತಾನಾಜಿ ಕಲ್ಯಾಣಕರ್ ಮಾತನಾಡಿ, ಮೂತ್ರಪಿಂಡ ಸಮಸ್ಯೆ ಎದುರಿಸುತ್ತಿರುವ ರೋಗಿಗಳು ಆತಂಕ ಪಡಬೇಕಾಗಿಲ್ಲ. ರೋಗ ಆರಂಭದ ಹಂತದಲ್ಲಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಗುಣ ಮುಖರಾಗಬಹುದು ಎಂದು ತಿಳಿಸಿದರು. ಮಂಚನ ಮಾಜಿ ಅಧ್ಯಕ್ಷ ಬದ್ರಿ ನಾರಾಯಣ ಮಾತನಾದರು.
ಸಮಾರಂಭದಲ್ಲಿ ಅಂಗವಿಕಲರಿಗೆ ತ್ರಿಚಕ್ರ ಸೈಕಲ್ ನೀಡಿದ ದಾನಿ ಅಶೋಕ ಗಾಂಧಿ ಅವರನ್ನು ಸನ್ಮಾನಿಸಲಾಯಿತು.