ಗುಲ್ಬರ್ಗ: ಜಿಲ್ಲೆಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಜಿಲ್ಲೆಯಲ್ಲಿ ಖಾಲಿಯಿರುವ ವೈದ್ಯಾಧಿಕಾರಿಗಳ ನೇಮಕಾತಿ ಮಾಡಿಕೊಳ್ಳಬೇಕೆಂದು ಜೈ ಕನ್ನಡಿಗರ ರಕ್ಷಣಾ ವೇದಿಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ವೈದ್ಯಕೀಯ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು. ಜೈ ಕನ್ನಡಿಗರ ರಕ್ಷಣಾ ವೇದಿಕೆ ಸಂಸ್ಥಾಪಕ ಸಚಿನ್ ಎಸ್. ಫರತಾಬಾತ್, ಕಾಶಿನಾಥ, ಎಸ್. ಮಾಳಗಿ, ಅಣವೀರ ಎಸ್. ಪಾಟೀಲ್, ಸಂದೇಶ ಪವಾರ್ ಪಾಲ್ಗೊಂಡಿದ್ದರು.
ಮಧ್ಯ ರೈಲ್ವೆ ಅಧ್ಯಕ್ಷರಾಗಿ ಪೋಮು
ಶಹಾಬಾದ್: ಚಿತ್ತಾಪುರ ತಾಲೂಕಿನ ಲಾಡ್ಲಾಪುರ ತಾಂಡಾದ ರೈಲ್ವೆ ನೌಕರ ಪೋಮು ರಾಠೋಡ ಸೋಲಾಪುರ ವಿಭಾಗದ ಪಜಾ, ಪಪಂ ರೈಲ್ವೆ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಸೋಲಾಪುರ ವಿಭಾಗಕ್ಕೆ ಆಯ್ಕೆಯಾದ ಮೊದಲ ಕನ್ನಡಿಗ ಅಧ್ಯಕ್ಷರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟಿ.ವಿ. ವಾಗ್ಮೋರೆ, ಕಾರ್ಯಾಧ್ಯಕ್ಷರಾಗಿ ಆರ್.ಎಲ್. ತುಪ್ಸಮಿಂದರೆ, ಸಹ ಕಾರ್ಯದರ್ಶಿಯಾಗಿ ಎಸ್.ಎಸ್. ಕಾಂಬಳೆ, ಖಜಾಂಚಿಯಾಗಿ ಸಿ.ಎ. ಸೋನಾಕಾಂಬಳೆ ಆಯ್ಕೆಯಾಗಿದ್ದಾರೆ.