ಚಿಂಚೋಳಿ: ಶರಣರು ಮತ್ತು ಮಹಾತ್ಮರ ತತ್ವ ಸಿದ್ಧಾಂತ- ಮಾರ್ಗದರ್ಶನಗಳನ್ನು ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಾಲೂಕು ಕೋಲಿ ಸಮಾಜದ ಅಧ್ಯಕ್ಷ ಲಕ್ಷ್ಮಣ ಆವಂಟಿ ಹೇಳಿದರು.
ತಾಲೂಕಿನ ಪಟಪಳ್ಳಿ ಗ್ರಾಮದಲ್ಲಿ ಬುಧವಾರ ನಿಜಶರಣ ಅಂಬಿಗರ ಚೌಡಯ್ಯ ಯುವಕ ಸಂಘದಿಂದ ಏರ್ಪಡಿಸಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ನಾಮಫಲಕ ಅನಾವರಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರು ಮಾನವ ಕುಲಕ್ಕೆ ಬೆಳಕನ್ನು ಚೆಲ್ಲಿದ್ದಾರೆ. ಯುವಕರು ಶರಣರ ನಡೆ- ನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ದೇಗಲಮಡಿ ಗ್ರಾಪಂ ಉಪಾಧ್ಯಕ್ಷ ಶಾಮರಾವ ಹೊಸಮನಿ ಮತ್ತು ತಾಲೂಕು ಕೋಲಿ ಸಮಾಜ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಯಪ್ಪ ಚಾಪಲ್ ಮಾತನಾಡಿದರು. ಮಿರಿಯಾಣ ಗ್ರಾಪಂ ಅಧ್ಯಕ್ಷ ಬಸವರಾಜ ಕಿಷ್ಟಾಪೂರ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ರಾಜಕುಮಾರ ಚಂಡ್ರಾಸಿ, ನರಸಪ್ಪ, ಶಿವಕುಮಾರ, ಸಿದ್ದಪ್ಪ ಪಟಪಳ್ಳಿ, ಸಂತೋಷಕುಮಾರ ಚಿಟ್ಟಾ, ಕಾಶಿನಾಥ ನಾಟೀಕಾರ, ವೀರಪ್ಪಾ ಕೋರಿ, ಮಲ್ಲೇಶಪ್ಪ ಬೋಯಿನ್, ಪುಂಡಲೀಕ, ಕೃಷ್ಣಾರೆಡ್ಡಿ ಪೊಲೀಸ್ ಪಾಟೀಲ್ ಭಾಗವಹಿಸಿದ್ದರು. ಸಾಯಬಣ್ಣ ಸ್ವಾಗತಿಸಿದರು. ರಾಜಕುಮಾರ ನಿರೂಪಿಸಿದರು. ರಮೇಶ ವಂದಿಸಿದರು.