ದತ್ತಿ ಉಪನ್ಯಾಸ ಇಂದು

Updated on: 

ಗುಲ್ಬರ್ಗ: ನಗರದ ಕುಸನೂರ ರಸ್ತೆಯಲ್ಲಿರುವ ಡಾಕ್ಟರ್ ಕಾಲನಿಯ ಅನುಭವ ಮಂಟಪದಲ್ಲಿ ಜು.20ರಂದು ಬಸವ ಸಮಿತಿಯು ಲಿಂ. ಡಾ. ಎಂ.ಎಸ್. ಪಾಟೀಲ್ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಅಧ್ಯಕ್ಷೆ ಡಾ. ವಿಲಾಸವತಿ ಎಸ್. ಖೂಬಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಗನ ಬಸವಣ್ಣ ಸಾನ್ನಿಧ್ಯ ವಹಿಸುವರು. ಮಾಜಿ ಶಾಸಕ ಶರಣಬಸಪ್ಪ ದರ್ಶನಾಪುರ ಅಧ್ಯಕ್ಷತೆ ವಹಿಸುವರು. ಉಪನ್ಯಾಸಕ ಪ್ರೊ. ಕಲ್ಯಾಣರಾವ್ ಜಿ. ಪಾಟೀಲ್ ಶರಣರು ಮತ್ತು ಸ್ವರ್ಗ -ನರಕ ಕುರಿತು ಉಪನ್ಯಾಸ ನೀಡಲಿದ್ದಾರೆ. ಡಾ. ರಾಜಶ್ರೀ ಪಾಲಾದಿಯವರಿಗೆ ಇದೇ ಸಂದರ್ಭದಲ್ಲಿ ವೈದ್ಯ ರತ್ನ ಗೌರವ ಪ್ರಶಸ್ತಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ನೀರು ಸರಬರಾಜಿನಲ್ಲಿ ವ್ಯತ್ಯಯ ಇಂದು
ಗುಲ್ಬರ್ಗ: ನಗರಕ್ಕೆ ನೀರು ಪೂರೈಸುವ ಭೀಮಾ ಯೋಜನೆ ಮಾರ್ಗದಲ್ಲಿ ಕೊಟನೂರು-ಡಿ ಬಳಿ ಇರುವ ಮಧ್ಯಂತರ ನೀರೆತ್ತುವ ಕೇಂದ್ರದಲ್ಲಿನ ಯಂತ್ರ ಸುಟ್ಟುಹೋಗಿರುವುದರಿಂದ ಹಾಗೂ ಟ್ರಾನ್ಸ್‌ಫಾರ್ಮರ್‌ನಲ್ಲಿನ ತಾಂತ್ರಿಕ ದೋಷದಿಂದಾಗಿ ತೊಂದರೆ ಸೃಷ್ಟಿಯಾಗಿದೆ. ಹೀಗಾಗಿ ಜು.20ರಂದು ನಗರ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ನಾಗರಿಕರು ಸಹಕರಿಸಬೇಕು ಎಂದು ಜಲ ಮಂಡಳಿಯ ಸಹಾಯಕ ಅಭಿಯಂತರರ ಕಚೇರಿ ಪ್ರಕಟಣೆ ತಿಳಿಸಿದೆ.
ಸಖೀ ಗೀತ ಮಾಸಪತ್ರಿಕೆ ಬಿಡುಗಡೆ ಇಂದು
ಗುಲ್ಬರ್ಗ: ನಗರದ ಜಿಪಂ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಜು.20ರಂದು ಸಂಜೆ 5ಕ್ಕೆ ಸಖೀ ಗೀತ ಮಾಸಪತ್ರಿಕೆ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಸಕ ಜಿ. ರಾಮಕೃಷ್ಣ ಅಧ್ಯಕ್ಷತೆ ವಹಿಸುವರು. ಎಂರೇಲ್ ಕಂಪನಿ ಸಿಇಒ ಎಂ.ಎಸ್. ನಾಗೇಂದ್ರ ಕಾರ್ಯಕ್ರಮ ಉದ್ಘಾಟಿಸುವರು. ನಿವೃತ್ತ ಪೊಲೀಸ್ ಕಮಿಷನರ್ ಜ್ಯೋತಿ ಪ್ರಕಾಶ ಮಿರ್ಜಿ, ಹಿರಿಯ ಸಾಹಿತಿ ವಸಂತ ಕುಷ್ಟಗಿ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಪುಸ್ತಕ ಮೇಳ ಇಂದಿನಿಂದ
ಗುಲ್ಬರ್ಗ: ನಗರದ ಬಾಪುಗೌಡ ದರ್ಶನಾಪುರ ರಂಗಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ಜು.20ರಿಂದ 23ರವರೆಗೆ ಪುಸ್ತಕ ಮೇಳ ಏರ್ಪಡಿಸಲಾಗಿದೆ. ದೇಶದ ಎಲ್ಲ ಭಾಷೆಗಳಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ರಾಜ್ಯದ ಎಲ್ಲ ಕಡೆಗಳಲ್ಲಿ ಈ ರೀತಿಯ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆ ಮಾಡಿ ಓದುಗರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪರವಾಗಿ ಜಯಂತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ತಿಳಿಸಿದ್ದಾರೆ.
'ನನ್ನ ಅಂಚೆ' ಕೌಂಟರ್ ನಾಳೆ ಆರಂಭ
ಗುಲ್ಬರ್ಗ: ನಿಮ್ಮ ವೈಯಕ್ತಿಕ ಸ್ಟ್ಯಾಂಪ್ ಬಳಸಿ ನಿಮ್ಮ ಪ್ರೀತಿ ಪಾತ್ರರನ್ನು ಅಚ್ಚರಿಗೊಳಿಸುವ ಸದಾವಕಾಶವನ್ನು ಗುಲ್ಬರ್ಗ ಅಂಚೆ ಇಲಾಖೆಯು ಕಲ್ಪಿಸಿಕೊಡಲಿದೆ. ಮದುವೆಯ ಆಹ್ವಾನ ಪತ್ರಿಕೆಯ ಮೇಲೆ ವಧು-ವರರ ಭಾವಚಿತ್ರ, ವಿವಾಹ ವಾರ್ಷಿಕೋತ್ಸವದಂದು ಪತಿ-ಪತ್ನಿಯರ ಭಾವಚಿತ್ರ, ಹುಟ್ಟುಹಬ್ಬದವರ ಭಾವಚಿತ್ರ ಒಳಗೊಂಡ ಅಂಚೆ ಚೀಟಿಯನ್ನು 'ನನ್ನ ಅಂಚೆ' ಮೂಲಕ ಪಡೆಯಬಹುದಾಗಿದೆ. ಈ ಕೌಂಟರ್‌ನ್ನು ಜು.21ರಂದು ಗುಲ್ಬರ್ಗ ಪ್ರಧಾನ ಅಂಚೆ ಕಚೇರಿಯಲ್ಲಿ ಉದ್ಘಾಟಿಸಲಾಗುವುದು. ವಿವರಕ್ಕೆ ದೂ. 08472-263800, 263802ಗೆ ಸಂಪರ್ಕಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com