ಕೆಂಭಾವಿ: ಪಟ್ಟಣದ ಟಿಪ್ಪುಸುಲ್ತಾನ್ ವೃತ್ತದಿಂದ ಸುರಪುರ ಹುನಗುಂದ ರಾಜ್ಯ ಹೆದ್ದಾರಿಗೆ ಸಂಪರ್ಕಿಸುವ ರಸ್ತೆಯಲ್ಲಿ ನೀರಿನ ಪೈಪ್ಲೈನ್ ಒಡೆದು ರಸ್ತೆ ಮೇಲೆ ಹರಿದು ಚರಂಡಿಯಾಗಿ ಪರಿವರ್ತನೆಯಾಗಿದ್ದರೂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಕೆಜೆಪಿ ಮುಖಂಡ ಸದ್ದಾಂ ನಾಸಿ ಆರೋಪಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಒಡೆದ ಪೈಪ್ಲೈನ್ ಮೂಲಕವೇ ಝೇಂಡಾಕಟ್ಟ ಬಡಾವಣೆಗೆ ನೀರು ಪೂರೈಕೆಯಾಗುತ್ತಿದ್ದು, ಕಲುಷಿತ ನೀರು ಸರಬರಾಜಾಗುತ್ತಿದೆ. ಇದರಿಂದಾಗಿ ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ. ಕೂಡಲೇ ಒಡೆದ ಪೈಪ್ಗಳನ್ನು ದುರಸ್ತಿ ಮಾಡಿ ಉತ್ತಮ ನೀರು ಒದಗಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.