ಗುಲ್ಬರ್ಗ: ನಗರದ ಅಮರೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಹೊಸದಾಗಿ ಸರ್ಕಾರದಿಂದ ಮಾನ್ಯತೆ ಪಡೆದ 6ನೇ ತರಗತಿ ಆಂಗ್ಲ ಮಾಧ್ಯಮ ಶಾಲೆಯನ್ನು ಅಪ್ಪರಾವದೇವಿ ಮುತ್ಯಾ ಉದ್ಘಾಟಿಸಿದರು.
ಈ ವೇಳೆ ಡಾ. ಮಾರುತಿರಾವ್ ಮಾಲೆ ಅವರಿಗೆ ಶಿಕ್ಷಣ ರತ್ನ, ಡಾ. ಎಸ್.ಬಸವರಾಜ ಅವರಿಗೆ ಸಮಾಜ ಸೇವಾ ರತ್ನ, ಬಸವರಾಜ ಇಂಡಿ ಅವರಿಗೆ ಕಾಯಕರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಪ್ರೊ. ಪಿ.ಸೂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಭಾಕರ ಇಂಡಿ ಕಾರ್ಯಕ್ರಮ ನಿರೂಪಿಸಿದರು. ಭ್ರಮರಾಂಬೆ ಪ್ರಾರ್ಥಿಸಿದರು. ಗುರುಲಿಂಗಪ್ಪ ವಂದಿಸಿದರು.