ಗುಲ್ಪರ್ಗ: ಕಾರ್ಮಿಕರು ತಮಗಿರುವ ಕಾನೂನುಗಳನ್ನು ತಿಳಿದುಕೊಂಡರೆ ಆಡಳಿತ ಮಂಡಳಿ ಶೋಷಣೆಯಿಂದ ಮುಕ್ತರಾಗಬಹುದು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಜಿ. ಸಿದ್ದಲಿಂಗಪ್ಪ ಸಲಹೆ ನೀಡಿದರು.
ಕಾರ್ಮಿಕ ಕಾನೂನುಗಳು ಮತ್ತು ಸಮಸ್ಯೆಗಳು ಕುರಿತು ಹೈ- ಕ ಗುತ್ತಿಗೆ ಕಾರ್ಮಿಕ ಫೆಡರೇಷನ್ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿ, ಕಾರ್ಮಿಕರ ಸ್ಥಿತಿಗತಿ ಮತ್ತು ಸವಲತ್ತುಗಳು ಪಡೆಯುವ 30 ಜಿಲ್ಲೆಗಳ ಪೈಕಿ ಗುಲ್ಬರ್ಗ 27ನೇ ಸ್ಥಾನದಲ್ಲಿದೆ. ಗುತ್ತಿಗೆ ಕಾರ್ಮಿಕರನ್ನು ನಿಯೋಜಿಸುವ ಏಜೆನ್ಸಿಗಿಂತಲೂ ಏಜೆನ್ಸಿಯ ಮೂಲಕ ಗುತ್ತಿಗೆ ನೌಕರರನ್ನು ಪಡೆದು ಆಡಳಿತ ಮಂಡಳಿಗಳೇ ಅವರಿಗೆ ಸಿಗುವ ಕನಿಷ್ಠ ವೇತನ, ಪಿಎಫ್, ಎಸ್ಐ ಸೇರಿದಂತೆ ಕಾರ್ಮಿಕ ಕಾನೂನಿನ ಪ್ರಕಾರ ಗುತ್ತಿಗೆ ಕಾರ್ಮಿಕರಿಗೆ ಪ್ರತಿ ತಿಂಗಳು 7ನೇ ದಿನಾಂಕದೊಳಗೆ ಸಂಬಳ ನೀಡಬೇಕು ಎಂದು ತಿಳಿಸಿದರು.
ಪಿಎಫ್, ಎಎಸ್ಐ ಸೇರಿ ಇತರ ಸೌಲಭ್ಯಗಳನ್ನು ಪರಿಶೀಲಿಸಿ ಆಡಳಿತ ಮಂಡಳಿಗಳು ಸಿಬ್ಬಂದಿಯನ್ನು ನೇಮಿಸುವ ಅವಶ್ಯಕತೆ ಇದ್ದರೂ ಆಡಳಿತ ಮಂಡಳಿ ಮಾಡುತ್ತಿಲ್ಲ ಎಂದರು. ಅದಕ್ಕಾಗಿ ಸವಲತ್ತುಗಳನ್ನು ಕಾರ್ಮಿಕರು ಜಾಗೃತಿಯಿಂದ ಪಡೆಯುವಂತೆ ಸಲಹೆ ಮಾಡಿದರು. ಕೆಎಸ್ಸಾರ್ಟಿಸಿ ಸ್ಟಾಪ್ ಮತ್ತು ವರ್ಕರ್ಸ್ ಫೆಡರೇಷನ್ ರಾಜ್ಯ ಉಪಾಧ್ಯಕ್ಷ ಸಿದ್ದಪ್ಪ ಪಾಲ್ಕಿ ಇಪಿಎಫ್, ಎಸ್ಐ ಕುರಿತು ಉಪನ್ಯಾಸ ಮಾಡಿದರು. ಹಣಮಂತ ರಟಕಲ್ ಅಧ್ಯಕ್ಷತೆ ವಹಿಸಿದ್ದರು. ಚಂದ್ರಶೇಖರ ಚಿಂಚೋಳಿ, ಸಿದ್ದಣ್ಣ ರಾಜವಾಳ, ಬಾಬು ಮಾತನಾಡಿದರು.