ಚಿತ್ತಾಪುರ: ಗುಲ್ಬರ್ಗ ಮೀಡಿಯಾ ಕ್ಲಬ್ ವತಿಯಿಂದ ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಜು.25ರಂದು ಬೆಳಗ್ಗೆ 11ಕ್ಕೆ ಪತ್ರಿಕಾ ದಿನಾಚರಣೆ ಹಾಗೂ ಹಿರಿಯ ಪತ್ರಕರ್ತರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕ ಕಾಶಿನಾಥ ಗುತ್ತೇದಾರ ತಿಳಿಸಿದ್ದಾರೆ. ವಾದಿರಾಜ ವ್ಯಾಸಮುದ್ರ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಪತ್ರಕರ್ತ ಶರಣು ಗೊಬ್ಬುರ, ಮಹೇಶ ಕುಲಕರ್ಣಿ, ಪ್ರಾಚಾರ್ಯ ಡಾ. ರಾಜೇಂದ್ರ ಯರನಾಳೆ ಆಗಮಿಸುವರು. ಕ್ಲಬ್ ಅಧ್ಯಕ್ಷ ಬಸವರಾಜ ಚಿನಿವಾರ ಅಧ್ಯಕ್ಷತೆ ವಹಿಸಲಿದ್ದಾರೆ.