'ಆಚರಣೆ ಮಾದರಿಯಾಗಲಿ'

Updated on: 

ಹುಣಸಗಿ: ಪ್ರತಿಯೊಬ್ಬರೂ ಹಬ್ಬ ಹರಿದಿನಗಳನ್ನು ಆಚರಿಸಿ. ಆದರೆ ನಮ್ಮ ಆಚರಣೆಗಳು ಇತರರಿಗೆ ಮಾದರಿಯಾಗಲಿ ಎಂದು ಹುಣಸಗಿ ವೃತ್ತ ನಿರೀಕ್ಷಕ ವಿಜಯ ಮುರಗುಂಡಿ ನುಡಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ರಂಜಾನ್ ಅಂಗವಾಗಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿ, ಕಾನೂನು, ಧರ್ಮ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅವುಗಳನ್ನು ಎಲ್ಲರೂ ಗೌರವಿಸಬೇಕು. ಕಾನೂನು ಪಾಲಿಸಿದರೆ ಸಮಾಜದ ಸ್ವಾಸ್ಥ್ಯ ಚೆನ್ನಾಗಿರುತ್ತದೆ. ಧರ್ಮ ಪಾಲಿಸಿದರೆ ಕುಟುಂಬ, ಸಮಾಜ, ಗ್ರಾಮ, ಪಟ್ಟಣ ಎಲ್ಲವೂ ನೆಮ್ಮದಿಯಿಂದ ಇರಲು ಸಾಧ್ಯ. ಅದರಂತೆ ಎಲ್ಲರ ನಂಬಿಕೆಗಳಿಗೆ ಬೆಲೆ ಕೋಡುವುದೇ ಮಾನವ ಧರ್ಮ ಎಂದು ತಿಳಿಸಿದರು. ಒಂದು ವೇಳೆ ಯಾರಾದರೂ ಅಹಿತಕರ ಘಟನೆ ನಡೆಸಲು ಮುಂದಾದರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಹುಣಸಗಿ ಪ್ರಭಾರಿ ಎಸ್‌ಐ ನರಸಿಂಹರಾವ್ ಮಾತನಾಡಿದರು. ಸುರೇಶ ನೀರಲಗಿ, ಸೈಯದ್ ಮುರ್ತುಜಾ ಸಾಬ್ ಬೆಣ್ಣೂರ, ಅನಿಪ್, ಮಹಮ್ಮದ್ ಅಲಿ, ಹಮೀದ್, ಖುರೇಶಿ, ಬಸವರಾಜ ಸ್ಥಾವರಮಠ, ಶರಣು, ಸೂಗಪ್ಪ ಮತ್ತಿತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com