ಯಾದಗರಿ: ನಗರದ ಹೊಸಳ್ಳಿ ಕ್ರಾಸ್ ಸಮೀಪದ ತಮ್ಮ ನಿವಾಸದಲ್ಲಿ ವಕ್ಫ್ ಮಂಡಳಿ ಜಿಲ್ಲಾಧ್ಯಕ್ಷ ಅಬ್ದುಲ್ ಬಿನ್ ಹಾಜರಿ ಚಾವುಸ್ ರಂಜಾನ್ ಅಂಗವಾಗಿ ಸಾವಿರಕ್ಕೂ ಹೆಚ್ಚು ಬಡ ಮುಸ್ಲಿಂ ಬಾಂಧವರಿಗೆ ಧಾನ್ಯ, ಬಟ್ಟೆ ವಿತರಿಸಿದರು. ನಂತರ ಮಾತನಾಡಿದ ಹಾಜರಿ, ನನಗೆ ಆ ದೇವರು ಬಡಜನತೆಯ ಹೆಚ್ಚಿನ ಸೇವೆ ಮಾಡುವುದಕ್ಕೆ ಹೆಚ್ಚಿನ ಜವಾಬ್ದಾರಿ ಹೊರಿಸುವ ಮೂಲಕ ಈಗ ಜಿಲ್ಲೆಯ ವಕ್ಫ್ ಮಂಡಳಿ ಜಿಲ್ಲಾ ಅಧ್ಯಕ್ಷನ ಸ್ಥಾನ ಕೊಟ್ಟಿದ್ದಾನೆ. ಕಾರಣ ಆ ಸ್ಥಾನವನ್ನು ನಾನು ಸರ್ವರ ಮನಗೆದ್ದು ಸಮರ್ಥವಾಗಿ ನಿಭಾಯಿಸುವ ಮೂಲಕ ಬಡ ಜನತೆ ಸೇವೆ ಮಾಡುತ್ತೇನೆ ಎಂದು ಹೇಳಿದರು.