ಗುಲ್ಬರ್ಗ: ಸ್ಟೇಷನ್ ಬಜಾರ್ ಠಾಣೆ ವ್ಯಾಪ್ತಿಯಲ್ಲಿ ಸರಗಳ್ಳರಿಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಸಚಿನ್ (23), ಪ್ರೇಮ (22) ಎಂದು ತಿಳಿಸಿದ್ದಾರೆ.
ಇವರು ಕಳೆದ 19ರಂದು ಕಾವೇರಿ ಗಂಡ ಚಂದ್ರಕಾಂತ ಮಾಹೂರಕರ, ಗಣೇಶ ನಗರ ಇವರನ್ನು ಸಿದ್ಧಿವಿನಾಯಕ ಗುಡಿ ಹತ್ತಿರ ವಿಳಾಸ ಕೇಳುವ ನೆಪದಲ್ಲಿ 2 ತೋಲಿ ಬಂಗಾರದ ಸರ ಅಪಹರಿಸಿದ್ದರು. ಬಂಧಿಸಿ ಅವರಿಂದ ಕಳವಿನ ಮಾಲು 60 ಸಾವಿರ ಮೌಲ್ಯದ 2 ತೊಲೆ ಬಂಗಾರದ ಮಾಂಗಲ್ಯ ಸರ ವಶಪಡಿಸಿಕೊಂಡಿದ್ದಾರೆ. ಬಂಧಿತರಿಬ್ಬರೂ ಬಾಪುನಗರ ಬಡಾವಣೆಯ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.