ಚಿತ್ತಾಪುರ: ರಾಜ್ಯದಲ್ಲಿ ನಿರಂತರವಾಗಿ ಮಹಿಳೆಯರ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರವನ್ನು ತಡೆಯಬೇಕೆಂದು ವೀರ ಕನ್ನಡಿಗರ ಸೇನೆ ತಾಲೂಕು ಅಧ್ಯಕ್ಷ ಲಕ್ಷ್ಮೀಕಾಂತ ತಾಂಡೂರಕರ ಒತ್ತಾಯಿಸಿದ್ದಾರೆ. ಮಕ್ಕಳ ಮೇಲಿನ ಅತ್ಯಾಚಾರಗಳು ನಾಚೀಕೆಗೇಡಿನ ಸಂಗತಿ. ಇದನ್ನು ತಡೆಯಬೇಕಾದ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಅರೋಪಿಸಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವದರಿಂದ ಕಾಮುಕರಿಗೆ ಭಯವಿಲ್ಲದಂತಾಗಿದ್ದು, ಪದೇ ಪದೆ ಅತ್ಯಾಚಾರ ಪ್ರಕರಣಗಳು ಮರುಕಳುಹಿಸುತ್ತಿವೆ ಎಂದರು.
ಸರ್ಕಾರವು ಎಚ್ಚೆತ್ತುಕೊಂಡು ಕೃತ್ಯ ಎಸಗುವ ಕಾಮುಕರಿಗೆ ನ್ಯಾಯಲಯದಲ್ಲಿ ಜಾಮೀನು ಸಿಗದಂತೆ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ವೀರ ಕನ್ನಡಿಗರ ಸೇನೆ ನಗರ ಅಧ್ಯಕ್ಷ ಗುರುಲಿಂಗಪ್ಪ ಪೊಲೀಸ್ ಪಾಟೀಲ್, ಗೌರವ ಅಧ್ಯಕ್ಷೆ ಕವಿತಾ ಚವ್ಹಾಣ, ಜೈ ಕರವೇ ಶಿವಕುಮಾರ ಕುಂಬಾರ, ಲಕ್ಷ್ಮೀಬಾಯಿ, ಹಣಮಂತ ಇಂಜಳ್ಳಿಕರ್, ಅಶೋಕ ಬೀರನಳ್ಳಿ, ಯಂಕಪ್ಪಾ ಪಾನಶಾಪ, ವಿಠಲ ಇಂಜಳ್ಳಿಕರ್, ಗಾಯತ್ರಿದೇವಿ, ನಿಖಿತಾ, ದೇವಾನಂದ, ಸಿದ್ದಮ್ಮ, ಭಾಗ್ಯಶ್ರೀ ಪ್ರಿಯಾ, ರೂಪ, ಮಹಾದೇವ ಮಡಿವಾಳ, ಮಲ್ಲಿಕಾರ್ಜುನ ನಾಟಿಕಾರ, ಶಾಲಾ ಮಕ್ಕಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.