ಇಬ್ಬರು ಸರಗಳ್ಳರ ಬಂಧನ

Updated on: 

ಗುಲ್ಬರ್ಗ:  ಸ್ಟೇಷನ್ ಬಜಾರ್ ಠಾಣೆ ವ್ಯಾಪ್ತಿಯಲ್ಲಿ ಸರಗಳ್ಳರಿಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಸಚಿನ್ (23), ಪ್ರೇಮ (22) ಎಂದು ತಿಳಿಸಿದ್ದಾರೆ.
ಇವರು ಕಳೆದ 19ರಂದು ಕಾವೇರಿ ಗಂಡ ಚಂದ್ರಕಾಂತ ಮಾಹೂರಕರ, ಗಣೇಶ ನಗರ ಇವರನ್ನು ಸಿದ್ಧಿವಿನಾಯಕ ಗುಡಿ ಹತ್ತಿರ ವಿಳಾಸ ಕೇಳುವ ನೆಪದಲ್ಲಿ 2 ತೋಲಿ ಬಂಗಾರದ ಸರ ಅಪಹರಿಸಿದ್ದರು. ಬಂಧಿಸಿ ಅವರಿಂದ ಕಳವಿನ ಮಾಲು 60 ಸಾವಿರ ಮೌಲ್ಯದ 2 ತೊಲೆ ಬಂಗಾರದ ಮಾಂಗಲ್ಯ ಸರ ವಶಪಡಿಸಿಕೊಂಡಿದ್ದಾರೆ. ಬಂಧಿತರಿಬ್ಬರೂ ಬಾಪುನಗರ ಬಡಾವಣೆಯ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com