ಟಿ.ನರಸೀಪುರ: ತಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಗಡಿನಾಡು ಚಾಮರಾಜನಗರ ಜಿಲ್ಲೆಯ ರೈತರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಚಾಮರಾಜನಗರ ಎಪಿಎಂಸಿಯ ನೂತನ ಅಧ್ಯಕ್ಷ ಆಲ್ದೂರ್ ಸಿ. ರಾಜಶೇಖರ್ ಇಲ್ಲಿ ಹೇಳಿದರು. ಪಟ್ಟಣಕ್ಕೆ ಹೊಂದಿಕೊಂಡಂತಿರುವ ಹೆಳವರಹುಂಡಿಯಲ್ಲಿ ಮಂಗಳವಾರ ವೀರಶೈವ ಸಮುದಾಯದ ಮುಖಂಡರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈ ಭಾಗದ ಸ್ನೇಹಿತರು, ಬಂಧುಗಳ ಒತ್ತಾಸೆಯಂತೆ ಅಲ್ಲಿನ ಎಪಿಎಂಸಿ ಸದಸ್ಯರ ಸಂಪೂರ್ಣ ಬೆಂಬಲದಿಂದಾಗಿ ತಮಗೆ ಅಧ್ಯಕ್ಷ ಸ್ಥಾನ ಸಿಕ್ಕಿರುವುದಕ್ಕೆ ಹೆಮ್ಮೆನಿಸುತ್ತದೆ. ಸಿಕ್ಕ ಅವಕಾಶ ಬಳಸಿಕೊಂಡು ಉತ್ತಮ ಕೆಲಸ ಮಾಡುತ್ತೇನೆ ಎಂದರು. ನಿವೃತ್ತ ಶಿಕ್ಷಕ ಬಿ.ಸೋಮಣ್ಣ ಮಾತನಾಡಿ, ರಾಜಶೇಖರ್ ಅವರು ಟಿಎಪಿಸಿಎಂಎಸ್ ಅಧ್ಯಕ್ಷರಾಗಿದ್ದ ನಂತರ ಎಪಿಎಂಸಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಕಾಂಗ್ರೆಸ್ ಮುಖಂಡ ಎಸ್.ಜಗದೀಶ್, ಆಲಗೂಡು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹೆಳವರಹುಂಡಿ ಮೂರ್ತಿ, ಪರಶಿವಮೂರ್ತಿ, ರಾಜಶೇಖರ್ ಇದ್ದರು.