ರೈಲಿನಿಂದ ಇಳಿಯುವಾಗ ಚಕ್ರಗಳಡಿ ಸಿಲುಕಿ ವ್ಯಕ್ತಿ ಸಾವು

Updated on: 

ಹೊಳೆನರಸೀಪುರ: ಚಲಿಸುತ್ತಿದ್ದ ರೈಲಿನಿಂದ ಇಳಿಯುವ ಸಂದರ್ಭದಲ್ಲಿ ಬಿದ್ದು ರೈಲಿನ ಚಕ್ರಗಳಡಿಗೆ ಸಿಲುಕಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಟ್ಟಣದ ರೈಲು ನಿಲ್ದಾಣದಲ್ಲಿ ಬುಧವಾರ ಮದ್ಯಾಹ್ನ ಸಂಭವಿಸಿದೆ. ಮೃತನನ್ನು  ತಾಲೂಕಿನ ಗುಳ್ಳದಪುರ ಗ್ರಾಮದ ಜವರೇಗೌಡ (85) ಎಂದು ಗುರುತಿಸಲಾಗಿದೆ.
 ಜವರೇಗೌಡ ಅವರು ಅನಾರೋಗ್ಯದ ಕಾರಣದಿಂದ ಹಾಸನದಲ್ಲಿನ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ರೈಲಿನಲ್ಲಿ ಗ್ರಾಮಕ್ಕೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ, ಪಟ್ಟಣದ ರೈಲು ನಿಲ್ದಾಣದಲ್ಲಿ ಇಳಿಯಬೇಕಿತ್ತು., ರೈಲಿನಲ್ಲಿ ನಿದ್ರಿಸುತ್ತಿದ್ದ ಅವರು, ರೈಲು ಪಟ್ಟಣದ ನಿಲ್ದಾಣದಿಂದ ಹೊರಡುವ ಸಂದರ್ಭದಲ್ಲಿ ಎಚ್ಚರಗೊಂಡು ಗಾಬರಿಯಿಂದ ರೈಲಿನಿಂದ  ಇಳಿಯಲು ಯತ್ನಿಸಿದ ಸಂದರ್ಭ ಕೆಳಗೆ ಬಿದ್ದು, ರೈಲಿನ ಚಕ್ರಗಳಡಿಗೆ ಸಿಲುಕಿ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ .
ಸೀಮೆಎಣ್ಣೆ ಸುರಿದು ಪತ್ನಿ ಕೊಲೆ
ಚನ್ನರಾಯಪಟ್ಟಣ: ಪತಿಯೇ ತನ್ನ  ಪತ್ನಿಗೆ ಸೀಮೆಎಣ್ಣೆ ಸುರಿದು  ಕೊಲೆ ಮಾಡಿರುವ ಘಟನೆ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಕೊತ್ತನಘಟ್ಟ ಗ್ರಾಮದಲ್ಲಿ  ಇತ್ತೀಚೆಗೆ ನಡೆದಿದೆ. ಗ್ರಾಮದ ಪುಷ್ಪ  (35) ಎಂಬುವರೇ ಕೊಲೆಯಾದ ದುರ್ದೈವಿ. ಅವರು ಅಡಿಗೆ ಮನೆಯಲ್ಲಿ ಗ್ಯಾಸ್ ಸ್ಟೌವ್‌ನಲ್ಲಿ  ಹಾಲು ಕಾಯಿಸುತ್ತಿದ್ದಾಗ ತನ್ನ ಗಂಡ ರವಿಗೌಡ ಜಗಳ ತೆಗೆದಿದ್ದಾನೆ. ಮಾತಿಗೆ ಮಾತು ಬೆಳೆದು ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಇದರಿಂದ ತೀವ್ರ ಗಾಯಗೊಂಡ ಪುಷ್ಪ ಅವರನ್ನು ಹಾಸನದ  ಸರ್ಕಾರಿ ಆಸ್ಪತ್ರೆಗೆ ಸೇರಿಸಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ  ಬುಧವಾರ ಮೃತಪಟ್ಟಿದ್ದಾರೆ. ಈ ಬಗ್ಗೆ  ಶ್ರವಣಬೆಳಗೊಳ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮರಳು ಸಮೇತ 2 ಟ್ರ್ಯಾಕ್ಟರ್ ವಶ
ಸಕಲೇಶಪುರ: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಮರಳು ಸಮೇತ 2 ಟ್ರ್ಯಾಕ್ಟರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ  ಹಳೇಬೇಲೂರು ರಸ್ತೆ ಪ್ಲಾಂಟರ್
ಹತ್ತಿರ ಟ್ರ್ಯಾಕ್ಟರ್ ಚಾಲಕನೊಬ್ಬ ಸರ್ಕಾಕ್ಕೆ ಯಾವುದೇ ರಾಜಧನ ಕಟ್ಟದೆ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಿದ್ದವನು ಟ್ರ್ಯಾಕ್ಟರನ್ನು ಸ್ಥಳದಲ್ಲಿ ಬಿಟ್ಟು ಓಡಿಹೋಗಿದ್ದಾನೆ. ಸ್ಥಳದಲ್ಲಿದ್ದ ಮರಳು ಸಮೇತ ಟ್ರ್ಯಾಕ್ಟರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
   ಮತ್ತೊಂದು ಪ್ರಕರಣದಲ್ಲಿ  ತಾಲೂಕಿನ  ಹಳೇಬೇಲೂರು ರಸ್ತೆ ಪ್ಲಾಂಟರ್ ಹತ್ತಿರ ಟ್ರ್ಯಾಕ್ಟರ್ ಚಾಲಕ ಯಾವುದೇ ರಾಜಧನ ಕಟ್ಟದೆ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಿದ್ದವನು ಟ್ರ್ಯಾಕ್ಟರನ್ನು  ಸ್ಥಳದಲ್ಲಿ ಬಿಟ್ಟು ಓಡಿಹೋಗಿದ್ದಾನೆ.
  ಪೊಲೀಸರು  ಸ್ಥಳದಲ್ಲಿದ್ದ ಮರಳು ಸಮೇತ ಟ್ರ್ಯಾಕ್ಟರನ್ನು ವಶಪವಡಿಸಿಕೊಂಡಿದ್ದಾರೆ. ಈ ಎರಡೂ ಪ್ರಕರಣಪಟ್ಟಣ ಠಾಣೆಯಲ್ಲಿ ದಾಖಲಾಗಿದೆ.
ದೇವಸ್ಥಾನದ ಹುಂಡಿ ಕಳವು
ಹಾಸನ: ನಗರ ಸಂಗಮೇಶ್ವರ ಬಡಾವಣೆ ಸಂಗಮೇಶ್ವರ ದೇವಸ್ಥಾನದ ಬಾಗಿಲ ಬೀಗವನ್ನು ಕಳ್ಳರು ಮುರಿದು ಒಳಪ್ರವೇಶಿಸಿ ದೇವಸ್ಥಾನದಲ್ಲಿದ್ದ ಹುಂಡಿಯನ್ನು ಹೊಡೆದು ಹುಂಡಿಯಲ್ಲಿದ್ದ 3000 ರು.  ಹಣವನ್ನು ಕಳವು ಮಾಡಿರುವ ಘಟನೆ  ಇತ್ತೀಚೆಗೆ ನಡೆದಿದೆ. ಈ ಬಗ್ಗೆ ದೇವಸ್ಥಾನದ ಅರ್ಚಕ  ಮುದ್ದಪ್ಪ   ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಮದ್ಯ: ಆರೋಪಿ ಬಂಧನ
ಅರಸೀಕೆರೆ: ಸುಳದಿಮ್ಮನಹಳ್ಳಿ ಗ್ರಾಮದ ಪರಪ್ಪ (35) ಎಂಬವರು   ಅಂಗಡಿಯಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಆತನನ್ನು ಬಂಧಿಸಿರುವ ಘಟನೆ  ಮಂಗಳವಾರ ನಡೆದಿದೆ. ಮದ್ಯ ಮಾರಾಟಕ್ಕಿಟ್ಟಿದ್ದ 1428 ರು. ಮೌಲ್ಯದ ಮದ್ಯದ ಸಾಚೆಟ್ ವಶಪಡಿಸಿಕೊಂಡಿರುವ ಬಾಣಾವರ ಠಾಣೆಯ ಪೊಲೀಸರು  ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ತಾಯಿ -ಮಗು  ನಾಪತ್ತೆ
ಸಕಲೇಶಪುರ: ತಾಲೂಕಿನ  ಯಸಳೂರು ಹೋಬಳಿಯ ಆದ್ರಿಗೆರೆ ಸುರೇಂದ್ರ ಅವರ ಪತ್ನಿ  ರೂಪ ಉರುಫ್ ರುಕ್ಮಿಣಿ (25) ಅವರು ವರ್ಷದ ಹೆಣ್ಣು ಮಗು ಸ್ವಾತಿ ಮನೆಯಿಂದ ಹೊರಗೆ ಹೋದವರು ವಾಪಸ್ ಮನೆಗೆ ಬಾರದೆ ನಾಪತ್ತೆಯಾದ ಘಟನೆ ನಡೆದಿದೆ. ರೂಪ ಉರುಫ್ ರುಕ್ಮಿಣಿ ಅವರು 5.4  ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಮನೆಯಿಂದ ಹೋಗುವಾಗ ಚೂಡಿದಾರ ಧರಿಸಿದ್ದರು. ಕನ್ನಡ  ಮಾತನಾಡುತ್ತಾಳೆ,  ಮನೆಯಿಂದ ಹೋಗುವಾಗ ಲಂಗ ಬ್ಲೌಸ್ ಧರಿಸಿದ್ದಳು ಎಂದು ತಂದೆ  ರಂಗೇಗೌಡ ಯಸಳೂರು ಠಾಣೆಗೆ ದೂರು ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com