ಸಹಕಾರ ಸಂಘಗಳ ಕಾಯಿದೆಗೆ ತಿದ್ದುಪಡಿ

Updated on

ಹಾಸನ: ಸಂವಿಧಾನ 1997ನೇ ತಿದ್ದುಪಡಿಯ ಅನ್ವಯ ರಾಜ್ಯ ಸರ್ಕಾರವು ಕರ್ನಾಟಕ ಸಹಕಾರ ಸಂಘಗಳ ಕಾಯಿದೆ 1959ಕ್ಕೆ ತಿದ್ದುಪಡಿ ಮಾಡಿರುತ್ತದೆ. ಹೊಸ ಕಾಯಿದೆಯ ಕಲಂಗಳು ಫೆಬ್ರವರಿ 11ರಿಂದ ಜಾರಿಗೆ ಬಂದಿದೆ. ಕರ್ನಾಟಕ ಸಹಕಾರ ಸಂಘಗಳ(ತಿದ್ದುಪಡಿ) ಅಧಿನಿಯಮ 2012ರಂತೆ ಆಡಳಿತ ಮಂಡಳಿ ಸದಸ್ಯರುಗಳ ಸಂಖ್ಯೆ, ಮೀಸಲಾತಿ ಪ್ರಮಾಣ, ವಾರ್ಷಿಕ ಮಹಾಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳು, ಮಹಾಸಭೆ ನಡೆಸಬೇಕಾದ ಅವಧಿ ಚುನಾವಣೆ ನಡೆಸಲು ಚುನಾವಣಾ ಆಯೋಗದ ರಚನೆ, ಸಹಕಾರ ಸಂಘಗಳ ಲೆಕ್ಕ ಪತ್ರಗಳ ಆಡಿಟ್ ಮಾಡಬೇಕಾದ ಬಗ್ಗೆ ನೀತಿ ನಿಯಮಗಳು ಇತ್ಯಾದಿಗಳ ಬಗ್ಗೆ ಪ್ರಮುಖವಾಗಿ ತಿದ್ದುಪಡಿ ಮಾಡಬೇಕಾಗಿದೆ. ಆದುದರಿಂದ ನೀರು ಬಳಕೆದಾರರ ಸಹಕಾರ ಸಂಘಗಳು ಹೊಂದಿರುವ ಉಪ ನಿಯಮಗಳಲ್ಲಿ (ಬೈಲಾ) ಸದರಿ ತಿದ್ದುಪಡಿಗಳನ್ನು ಅನ್ವಯವಾಗುವ ಬೈಲಾಗಳ ನಿಯಮಗಳಲ್ಲಿ 90 ದಿವಸಗಳೊಳಗಾಗಿ ತಪ್ಪದೇ ಅಳವಡಿಸಿಕೊಳ್ಳಬೇಕಾಗಿರುತ್ತದೆ. ಕೂಡಲೇ ಕರಡು(ಬೈಲಾ) ಉಪನಿಯಮ ತಯಾರಿಸಿಕೊಂಡು ಸಂಘದ ವಿಶೇಷ ಸರ್ವ ಸದಸ್ಯರುಗಳ ಮಹಾ ಸಭೆಯಲ್ಲಿ ಅನುಮೋದನೆ ಪಡೆದು ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಕಾಡಾ, ಸಾರ್ವಜನಿಕ ಕಚೇರಿಗಳ ಕಟ್ಟಡ, ಮೈಸೂರು ಅವರಿಂದ ಅನುಮೋದನೆ ಪಡೆಯಬೇಕಾಗಿರುವುದರಿಂದ ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಸಹಕಾರ ಸಂಘಗಳಿಗೆ ತಿಳಿಯಪಡಿಸಿದೆ. ಈ ಬಗ್ಗೆ ಸಂಬಂಧಪಟ್ಟ ಸಹಕಾರ ಸಂಘಗಳು ಆಡಳಿತ ಮಂಡಳಿಯ ನಿರ್ಣಯದ ಠರಾವು ಪ್ರತಿ ಮತ್ತು ಅರ್ಹ ಮತದಾರರುಗಳ ಪಟ್ಟಿಯನ್ನು ಸಿದ್ದಪಡಿಸಿ ವ್ಯಾಪ್ತಿಗೆ ಬರುವ ಸಹಾಯಕ ಕೃಷಿ ಅಧಿಕಾರಿಗಳು ಮತ್ತು ಕೃಷಿ ಸಹಾಯಕರು, ಕಾಡಾ ಇವರುಗಳ ಮೂಲಕ ಜರೂರು ಸಲ್ಲಿಸುವ ಬಗ್ಗೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.   ತುರ್ತು ಕ್ರಮ ಕೈಗೊಳ್ಳಲು ಸಹಕಾರ ಸಂಘಗಳಿಗೆ ಮೈಸೂರು ಕಾವೇರಿ ಜಲಾನಯನ ಯೋಜನೆಯ ಕಾಡಾ ಭೂ ಅಭಿವೃದ್ಧಿ ಅಧಿಕಾರಿ(ಸಹಕಾರ) ಇವರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2440009.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಪ್ರವಾಸ ಇಂದು
ಹಾಸನ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರ್ ನಾಯಕ್ ಅವರ ಪ್ರವಾಸ ಕಾರ್ಯಕ್ರಮದನ್ವಯ ಜು.11ರಂದು ಬೆಳಗ್ಗೆ 11ಕ್ಕೆ ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳುವರು. ಮಧ್ಯಾಹ್ಮ  2.30 ಕ್ಕೆ ಜಿಲ್ಲೆಯಲ್ಲಿ ಕೆಲವು ಕಾಮಗಾರಿಗಳ ಸ್ಥಳ ತನಿಖೆ ನಡೆಸುವರು.
ಗುಡಿ ಕೈಗಾರಿಕೆ ಸ್ಥಾಪಿಸಲು ಆಹ್ವಾನ
ಹಾಸನ: ಪ್ರಧಾನಮಂತ್ರಿ ಉದ್ಯೋಗ ಸೃಜನಾ (ಪಿ.ಎಂ.ಇ.ಜಿ.ಪಿ) ಯೋಜನೆಯಡಿಯಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಹಾಸನ ಇವರಿಂದ ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಗ್ರಾಮೋದ್ಯೋಗ ಗುಡಿಕೈಗಾರಿಕೆಗಳನ್ನು ಸ್ಥಾಪಿಸಲು ಆಸಕ್ತಿಯುಳ್ಳ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಜುಲೈ 15 ಕೊನೆಯ ದಿನ. ಹೆಚ್ಚಿನ ಮಾಹಿತಿಗೆ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ನಂ.394 ವೆಂಕಟರಮಣೇಗೌಡ ಬಿಲ್ಡಿಂಗ್, ರಂಗೋಲಿಹಳ್ಳ, ಉತ್ತರಬಡಾವಣೆ, ಹಾಸನ - 573201, ದೂ- 94808 25627, 93417 93773.
6 ಲಕ್ಷ ಹೆಚ್ಚುವರಿ ರಾಜಸ್ವ ಸಂಗ್ರಹ
ಹಾಸನ: ಏಪ್ರಿಲ್ 2013ರಿಂದ ಜೂನ್ವರೆಗೆ ಸಕಲೇಶಪುರ ಪ್ರಾದೇಶಿಕ ಸಾರಿಗೆ ಕಚೇರಿಯ ಪ್ರಗತಿಯ ಅಂಕಿಅಂಶಗಳ ವಿವರ ಕೆಳಕಂಡಂತಿದೆ. ಜೂನ್ -2013 ರ ವರೆಗೆ ವಸೂಲಿ ಮಾಡಬೇಕಾಗಿದ್ದ ರಾಜಸ್ವ 302 ಲಕ್ಷ ರು, ವಸೂಲಾಗಿರುವ ರಾಜಸ್ವ 308 ಲಕ್ಷ ರು, ಹೆಚ್ಚುವರಿ ರಾಜಸ್ವ ಸಂಗ್ರಹ 6 ಲಕ್ಷ ರು, ಪ್ರಸಕ್ತ ವರ್ಷ ತಪಾಸಣೆ ಮಾಡಿರುವ ಒಟ್ಟು ವಾಹನಗಳು 1593, ಅ) ರಾಜದಂಡ ಸಂಗ್ರಹ ರೂ. 3.31 ಲಕ್ಷ, ಆ)  ಬಾಕಿ ತೆರಿಗೆ ಸಂಗ್ರಹ 3.15 ಲಕ್ಷ ರು, ಅಧಿಕ ಭಾರ ಸಾಗಾಣಿಕೆ ವಾಹನಗಳ ಮೇಲೆ ಪ್ರಕರಣ ದಾಖಲು 31 ವಾಹನಗಳು, 1577 ವಿವಿಧ ವರ್ಗದ ವಾಹನಗಳನ್ನು ನೋಂದಣಿ ಮಾಡಲಾಗಿದೆ ಎಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಡಾ.ಎಂ.ಆರ್. ಕೇಶವಧರಣಿ ತಿಳಿಸಿದ್ದಾರೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com