ಹಾಸನ: ಸೂಕ್ಷ್ಮ ಜೀವಿಗಳ ಸಂರಕ್ಷಣೆ, ಉತ್ತಮ ಕೈತೋಟದ ನಿರ್ವಹಣೆ, ಮಣ್ಣಿನ ಸಂರಕ್ಷಣೆಯಿಂದ ಜೀವ ವೈವಿಧ್ಯ ಸಂರಕ್ಷಣೆ ಹಾಗೂ ಉತ್ತಮ ಆರೋಗ್ಯ ವರ್ಧನೆಗೆ ಕಾರಣ ವಾಗುತ್ತದೆ ಎಂದು ಜಿಪಂ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ರವಿ ಹೇಳಿದರು.
ರಾಜ್ಯ ವಿಜ್ಞಾನ ಪರಿಷತ್ ಪ್ರತಿಧ್ವನಿ ಸಂಸ್ಥೆ ಸಹಯೋಗದಲ್ಲಿ ದಾಸರ ಕೊಪ್ಪಲು ಗ್ರಾಮದಲ್ಲಿ ನಡೆದ ರಾಷ್ಟ್ರೀಯ ಪರಿಸರ ಜಾಗೃತಿ ಆಂದೋಲನದಲ್ಲಿ ಅವರು ಮಾತನಾಡಿದರು. ಸಂಘಗಳು ಪ್ರತಿ ವಾರ ಸಭೆ ಸೇರಿ ಹಣಕಾಸಿನ ವಿಚಾರವನ್ನಷ್ಟೇ ಅಲ್ಲದೇ ಸಂಸ್ಥೆಗಳು ಆಯೋಜಿಸುವ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹೆಚ್ಚಿನ ತಿಳಿವಳಿಕೆ ಪಡೆಯಬೇಕು. ತೋಟಗಾರಿಕಾ ಇಲಾಖೆಯ ಸವಲತ್ತು ಸದುಪಯೋಗಪಡಿಸಿ ಕೊಳ್ಳಬೇಕು. ಇಂತಹ ವೇದಿಕೆ ಕಲಿಸುವ ಸ್ವಯಂ ಸೇವಾ ಸಂಸ್ಥೆಗಳು ಶ್ಲಾಘನೀಯ ಎಂದರು. ಸಂಸ್ಥೆಯ ನಿರ್ದೇಶಕಿ ಎಚ್.ಎಲ್. ಮೋಹನಕುಮಾರಿ ಮಾತನಾಡಿ, ಕೈತೋಟ ನಿರ್ವಹಣೆ ಮಹಿಳೆಯರ ಆದ್ಯ ಕರ್ತವ್ಯ. ಇದರಿಂದ ಆದಾಯ, ಆರೋಗ್ಯ, ಜೀವ ವೈವಿಧ್ಯ ಸಂರಕ್ಷಣೆಗೆ ನಾಂದಿ ಎಂದರು. ಸ್ವಸಹಾಯ ಸಂಘದ ಪದಾಧಿಕಾರಿಗಳು, ಸದಸ್ಯರು, ಶಾಲಾ ಶಿಕ್ಷಕರು, ಅಂಜಲಿ ರವಿ ಮಾತನಾಡಿದರು. ಪ್ರತಿ ಸಂಘಕ್ಕೆ 2 ರಂತೆ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.
Advertisement