ಹಾಸನ: ವಿಮಾ ನಿಗಮದ ನೌಕರರ ಸಂಘದ ಮೈಸೂರು ವಿಭಾಗದ ವತಿಯಿಂದ ಎಲ್ಐಸಿಯ ನಿವೃತ್ತ ಅಧಿಕಾರಿ ಸಿ.ಎಸ್. ವೆಂಕಟೇಶ್ ಅವರಿಗೆ ಅಭಿನಂದನಾ ಸಮಾರಂಭವನ್ನು ಮಾ.2ರಂದು ಮಧ್ಯಾಹ್ನ 2ಕ್ಕೆ ಎಲ್ಐಸಿ ಬ್ಯುಲ್ಡಿಂಗ್ನಲ್ಲಿ ಏರ್ಪಡಿಸಲಾಗಿದೆ.
ನಿಗಮದ ಅಧ್ಯಕ್ಷ ಎನ್.ವಿಜಯಕುಮಾರ್ ಅಧ್ಯಕ್ಷತೆ ವಹಿಸುವರು.
ವಾರ್ಷಿಕೋತ್ಸವ
ಹಾಸನ: ನಗರದ ಹೊರವಲಯದ ಹೊಳೆನರಸೀಪುರ ರಸ್ತೆಯಲ್ಲಿರುವ ಶ್ರೀರಂಗ ವಿದ್ಯಾಸಂಸ್ಥೆಯ ರಾಜು ಕಾನ್ವೆಂಟ್, ಬೇಬಿ ಸಿಟ್ಟಿಂಗ್, ಪೂರ್ವ ಪ್ರಾಥಮಿಕ, ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲೆಗಳ ವಾರ್ಷಿಕೋತ್ಸವ ಸಮಾರಂಭವನ್ನು ಮಾ.2ರಂದು ಸಂಜೆ 4.30ಕ್ಕೆ ಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿದೆ. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್. ಜನಾರ್ದನ್ ಉದ್ಘಾಟಿಸುವರು.