ಹಾಸನ: ರಾಜ್ಯ ಸರ್ಕಾರ ಮಕ್ಕಳ ಉಚಿತ ಶಿಕ್ಷಣ ಹಕ್ಕು ಕಾಯಿದೆ (ಆರ್.ಟಿ.ಇ) ಕುರಿತಾಗಿ ಉಂಟುಮಾಡುತ್ತಿರುವ ಗೊಂದಲಗಳು, ಹಾಗೂ ಅದನ್ನು ಶಾಲೆಗಳಲ್ಲಿ ಜಾರಿಗೊಳಿಸುವ ಕುರಿತಾಗಿ ಮಾಹಿತಿ ವಿನಿಮಯ ಮಾಡಿಕೊಳ್ಳಲು ಹಾಸನ ಜಿಲ್ಲಾ ಖಾಸಗಿ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿ ಪದಾಧಿಕಾರಿಗಳ ಸಭೆಯನ್ನು ಮಾ.2 ರಂದು ಬೆಳಗ್ಗೆ 10.30ಕ್ಕೆ ಒಕ್ಕೂಟದ ಕಚೇರಿಯಲ್ಲಿ ಕರೆಯಲಾಗಿದೆ. ಕಾರ್ಯದರ್ಶಿ ಕುಮಾರ್ ಮೊ. 9448220868 ಸಂಪರ್ಕಿಸಬಹುದು.
ನಾಳೆ ಮನೆ ಮನೆ ಕವಿಗೋಷ್ಠಿ
ಹಾಸನ: ಮನೆ-ಮನೆ ಕವಿಗೋಷ್ಠಿಯ 196ನೇ ಮಾಸಿಕ ಕಾರ್ಯಕ್ರಮವನ್ನು ಮಾ.3ರಂದು ಸಂಜೆ 4.30ಕ್ಕೆ ಲೋಕಾಯುಕ್ತ ಡಿವೈಎಸ್ಪಿ ಹಾಗೂ ಸಾಹಿತಿ ಎಚ್.ಎಲ್. ಶಿವಬಸಪ್ಪ ಪ್ರಾಯೋಜಕತ್ವದಲ್ಲಿ ಮಹಾರಾಜಪಾರ್ಕಿನಲ್ಲಿರುವ ಶ್ರೀ ವಿವೇಕಾನಂದ ಯೋಗ ಶಿಕ್ಷಣ ಶಾಲೆಯಲ್ಲಿ ಏರ್ಪಡಿಸಲಾಗಿದೆ. ದೂ. 08172-246668 ಗೆ ಸಂಪರ್ಕಿಸಿ.