ಅರಸೀಕೆರೆ: 7ನೇ ವಾರ್ಡಿನಿಂದ ಬಿಎಸ್ಆರ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪಿ.ಯು. ದಿನೇಶ್ ಕಣದಿಂದ ನಿವೃತ್ತರಾಗಿ ವಾರ್ಡ್ನಿಂದ ಕಾಂಗ್ರೆಸ್ ಅಭ್ಯರ್ಥಿ ಹಾಜಿವಲಿ ಪರ ಕೆಲಸ ಮಾಡುವುದಾಗಿ ಘೋಷಿಸಿದ್ದಾರೆ. ಬಿಎಸ್ಆರ್ನಿಂದ ಅಧಿಕೃತ ಅಭ್ಯರ್ಥಿಯಾಗಿದ್ದು ಪಕ್ಷದಿಂದ ನಿರೀಕ್ಷಿತ ಬೆಂಬಲ ದೊರೆಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೆಂಬಲಿಸುವುದಾಗಿ ಹೇಳಿಕೆಯಲ್ಲಿ ತಿಳಿಸಿರುವುದಲ್ಲದೆ ಮತ ಬಾಂಧವರು ಕಾಂಗ್ರೆಸ್ ಬೆಂಬಲಿಸಿ ಮಾಜಿ ಸಚಿವ ಬಿ ಶಿವರಾಂ ಕೈ ಬಲಪಡಿಸಬೇಕೆಂದು ಮನವಿ ಮಾಡಿದ್ದಾರೆ.